9 ಸುಳ್ಳು ಕಥೆಗಳ ಟ್ರೈಲರ್ ಬಿಡುಗಡೆ – ಚಿತ್ರತಂಡಕ್ಕೆ ಸಾಥ್ ನೀಡಿದ ಶಿವಣ್ಣ..
ಸ್ಯಾಂಡಲ್ವುಡ್ ಹೊಸ ಪ್ರಯತ್ನಗಳು ನಡೆಯುತ್ತಲೆ ಇರುತ್ತೆವೆ. ಹೊಸ ಪ್ರತಿಭೆಗಳು ಹೊಸ ಆಲೋಚನೆ ಕಥೆ ಥೀಮ್ ಗಳನ್ನ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ಹೊಸ ಪ್ರತಿಭೆಗಳ ಕನಸಿಗೆ ನೀರೆರೆಯುವುದಕ್ಕೆ ಸ್ಯಾಂಡಲ್ ವುಡ್ ನಾಯಕರು ಸದಾ ಸಿದ್ದವಾಗಿದ್ದಾರೆ.
ಕನ್ನಡದಲ್ಲಿ 9 ಸುಳ್ಳು ಕಥೆಗಳು ಎಂಬ ಹೊಸ ಚಿತ್ರವೊಂದು ಬಿಡುಗಡೆಯಾಗುತ್ತಿದ್ದು ಇದಕ್ಕೆ ಡಾ ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ.
ನವರಸಗಳ ಆಧರಿತ ಸಿನಿಮಾ ಇದು
ನವರಸಗಳನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದ್ದು, ಇತ್ತೀಷೆಗಷ್ಟೇ ಈ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗಿದ್ದು, ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದ ಟ್ರೈಲರ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ವಾಯ್ಸ್ ನೀಡಿದ್ದು, ಒಂದು ಹಾಡನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹಾಡಿದ್ದಾರೆ.
ಈ ಸಿನಿಮಾವನ್ನು ಮಂಜುನಾಥ್ ಮುನಿಯಪ್ಪ ಎನ್ನುವವರು ನಿರ್ದೇಶನ ಮಾಡಿದ್ದು, ಇದರ ನಿರ್ಮಾಣದ ಜವಾಬ್ದಾರಿಯನ್ನು ಸಹ ಅವರೇ ವಹಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ, ವಿನಾಯ್ ಜೋಶಿ, ಕರಿ ಸುಬ್ಬು, ಸುಕೃತಾ ವಾಗ್ಳೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಪ್ರವೀಣ್ ಹಾಗೂ ಪ್ರದೀಪ್ ಸಂಗೀತ ನೀಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ 6 ಹಾಡುಗಳಿದ್ದು, ಸಂತ ಶಿಶುನಾಲ ಶರೀಫರ ಹಾಡೊಂದನ್ನು ಬಳಸಿಕೊಳ್ಳಲಾಗಿದೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಈ ಅದ್ಭುತ ಹಾಡುಗಳನ್ನು ಹಾಡಿದ್ದಾರೆ.








