ಕಂಚಿನ ವಿಗ್ರಹಗಳ ಕಳ್ಳತನ : ಆರೋಪಿಗಳು ಅಂದರ್ madikeri
ಮಡಿಕೇರಿ: ಪುರಾತನ ಕಾಲದ ಪಂಚಲೋಹ ಹಾಗೂ ಕಂಚಿನ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಲವ, ಮಂಜ, ರೋಹಿತ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಸುಮಾರು 10,20,000 ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2020ರಲ್ಲಿ ಮಡಿಕೇರಿ ಸಮೀಪದ ಕರ್ಣಗೇರಿ ಗ್ರಾಮದ ಆಶಾಕುಮಾರ್ ಮುಂಬೈ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.









