ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು kalaburagi saaksha tv
ಕಲಬುರಗಿ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಕುಸನೂರ ರಸ್ತೆಯಲ್ಲಿ ನಡೆದಿದೆ.
ಸಂಚಾರಿ ಠಾಣೆಯ ಎಎಸ್‌ಐ ಶ್ರೀಮಂತ್ ಅವರ ಮಗ ಸುನೀಲ್(28) ಸಾವನ್ನಪ್ಪಿದ್ದಾನೆ.
ನಗರದಿಂದ ಕುಸನೂರ ರಸ್ತೆಯಲ್ಲಿರುವ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









