ಪುನೀತ್ ಇನ್ನಿಲ್ಲ | ಕಣ್ಣೀರ ಕಡಲಲ್ಲಿ ಕರುನಾಡು Punith Raj kumar Saaksha tv
ಕನ್ನಡ ಚಿತ್ರರಂಗದ ರಾಜಕುಮಾರ.. ಅಭಿಮಾನಿಗಳ ಪ್ರೀತಿಯ ಅಪ್ಪು.. ನಟ ಪುನೀತ್ ರಾಜ್ ಕುಮಾರ್ ಇಂದು ವಿಧಿವಶರಾಗಿದ್ದಾರೆ.
ಇದು ಕನ್ನಡ ಚಿತ್ರರಂಗ ಎಂದೂ ಮರೆಯದ ದಿನ.. ಕನ್ನಡ ಚಿತ್ರರಂಗಕ್ಕಾದ ಬಹುದೊಡ್ಡ ಆಘಾತ.. ಕನ್ನಡಿಗರು ಕನಸಿನಲ್ಲಿಯೂ ಊಹಿಸಲಿಚ್ಛಿಸದ ವಿಷಯ. ಇಂದು ಬರ ಸಿಡಿಲು ಬಡಿದಂತೆ ಕನ್ನಡಿಗರಿಗೆ ಬಡಿದಿದೆ.
ಹೌದು..! ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ.. ಅನ್ನೋ ಸುದ್ದಿ ಸುಳ್ಳಾದರೇ ಚೆನ್ನಾಗಿರುತ್ತೆ. ಯಾವುದೋ ಒಂದು ಪವಾಡ ನಡೆದು ಅಪ್ಪು ನಗು ನಗುತ್ತಾ ಮರಳಲಿ ಬರಲಿ ಅನ್ನೋ ಪ್ರಾರ್ಥನೆ ಕೋಟ್ಯಾಂತರ ಅಭಿಮಾನಿಗಳದ್ದಾಗಿತ್ತು.
ಆದ್ರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಕ್ರೂರ ವಿಧಿಯಾಟದಲ್ಲಿ ಕನ್ನಡದರಾಜರತ್ನ ಮರೆಯಾಗಿದೆ. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ದೊಡ್ಮನೆ ಹುಡುಗ, ಸಹಿಸಲಾಗ ನೋವು ಕೊಟ್ಟು ಹೋಗಿದ್ದಾರೆ.









