ಮಣ್ಣಿನ ಹಣತೆ, ಪಿಂಗಾಣಿ ದೀಪಗಳ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರು : ದೀಪಗಳ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದೆ.
ಜನರು ಕೂಡ ದೀಪಾವಳಿ ಹಬ್ಬಕ್ಕೆ ಖರೀದಿ ಪ್ರಕ್ರಿಯೆಯಲ್ಲಿ ಮುಗಿಬಿದಿದ್ದಾರೆ.
ಗ್ರಾಹಕರು ಹೂವು, ಹಣ್ಣು, ತರಕಾರಿ, ದೀಪಗಳ ಖರೀದಿಯಲ್ಲಿ ತೊಡಗಿದ್ದಾರೆ.
ಇನ್ನೇನು ಕಾರ್ತಿಕ ಮಾಸವೂ ಹತ್ತಿರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮಣ್ಣಿನ ಹಣತೆ, ಬಗೆಬಗೆ ಪಿಂಗಾಣಿ ದೀಪಗಳ ಖರೀದಿಗೂ ಕೂಡ ಮುಂದಾಗಿದ್ದಾರೆ.
ಮಣ್ಣಿನ ಹಣತೆಯ ಜೊತೆಗೆ ರಂಗು ರಂಗಿನ ತೇಲುವ, ತೂಗುವ ದೀಪಗಳು, ವಿವಿಧ ವಿನ್ಯಾಸದ, ಚಿತ್ತಾಕರ್ಷಕ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ.
ವಿದ್ಯುತ್ ದೀಪಗಳೂ ಮಿನುಗುತ್ತಿವೆ.
ಈ ಬಾರಿಯೂ ಪರಿಸರ ಮಾಲಿನ್ಯ ತಡೆಯಲು ಹಸಿರು ಪಟಾಕಿ ಬಳಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು, ಇದಕ್ಕೆ ಜನರಿಂದಲೂ ಸೂಕ್ತ ಸ್ಪಂದನೆ ದೊರೆತಿದೆ.