ಆ 2 ತಂಡಗಳು ಮಾತ್ರ ನಮ್ಮನ್ನ ಸೋಲಿಸಬಲ್ಲವು.. ಹಾ ಹಾಗಾದ್ರೆ ನಾವು ಬುರ್ಜ್ ಖಲೀಫಾ ನೋಡ್ಲಿಕಾ ಬಂದ್ವೀ..?
“ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡಗಳು ಮಾತ್ರ ಇಂಗ್ಲೆಂಡ್ ತಂಡವನ್ನು ಸೋಲಿಸಬಲ್ಲವು” … ಇದು ಇಂಗ್ಲೆಂಡ್ ತಂಡ ಟಿ 20 ವಿಶ್ವಕಪ್-2021 ರ ಸೆಮಿಫೈನಲ್ ತಲುಪಿದಾಗ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮಾಡಿದ್ದ ಟ್ವೀಟ್. ಗ್ರೂಪ್-1ರಲ್ಲಿ ಅಗ್ರಸ್ಥಾನಿಯಾಗಿದ್ದ ಇಂಗ್ಲೆಂಡ್ ಗೆ ಗ್ರೂಪ್-2ರಲ್ಲಿ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡವನ್ನು ಸೆಮಿಸ್‍ನಲ್ಲಿ ಎದುರಿಸುವ ಅವಕಾಶವಿದೆ ಎಂದು ಪೀಟರ್ ಅಭಿಪ್ರಾಯಪಟ್ಟಿದ್ದರು. ಆದರೆ .. ಪೀಟರ್ಸನ್ ಊಹೆ ಹಳಿತಪ್ಪಿತು.
ಅಸಾಧಾರಣ ಯಶಸ್ಸಿನೊಂದಿಗೆ ನ್ಯೂಜಿಲೆಂಡ್ ಗುಂಪು-2 ರಲ್ಲಿ ಎರಡನೇ ಸ್ಥಾನ ಪಡೆದು ಸೆಮಿಸ್‍ಗೆ ಲಗ್ಗೆ ಇಟ್ಟಿತು. ಅಲ್ಲದೆ ಗೆಲುವಿನ ನಾಗಾಲೋಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೂ ಮರ್ಮಾಘಾತ ನೀಡಿತು. ಸೆಮಿಫೈನಲ್‍ನಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.. ಕೆವಿನ್ ಪೀಟರ್ಸನ್ ಗೆ ಜಬರ್ದಸ್ತ್ ಮೀಮ್ ಮೂಲಕ ಟ್ರೋಲ್ ಮಾಡಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಗುತ್ತಿರುವ ಫೋಟೋದಲ್ಲಿ, “ಹಾ, ನಾವು ಬುರ್ಜ್ ಖಲೀಫಾವನ್ನು ನೋಡಲು ಇಲ್ಲಿಗೆ ಬಂದಿದ್ದೀವಾ” ಎಂದು ಬರೆದಿದ್ದಾರೆ. ಪೀಟರ್ಸನ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ವಾಸಿಂ ಜಾಫರ್ ಮೀಮ್ ಮೂಲಕ ಟಾಂಗ್ ನೀಡಿದ್ದಾರೆ. ಅದೀಗ ವೈರಲ್ ಆಗುತ್ತಿದೆ.








