ನಾನಿ ಜೊತೆಗೆ `ಬೇಬಮ್ಮ ಲಿಪ್ ಲಾಕ್’ krithi-shetty saaksha tv
‘ಶ್ಯಾಮ್ ಸಿಂಗ ರಾಯ್’ ರಾಹುಲ್ ಸಂಕೃತ್ಯಾನ್ ನಿರ್ದೇಶನದ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ನ್ಯಾಜುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿದ್ದಾರೆ.
ಇನ್ನು ಚಿತ್ರದಲ್ಲಿ ಕೃತಿಶೆಟ್ಟಿ, ಸಾಯಿಪಲ್ಲಿ ಮತ್ತು ಮಡೋನಾ ಸೆಬಾಸ್ಟಿನ್ ನಾಯಕಿಯರಾಗಿ ನಟಿಸಿದ್ದಾರೆ. ಕೋಲ್ಕತ್ತಾ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರ ಮೂಡಿಬರುತ್ತಿದೆ.
ನಿನ್ನೆ (ಗುರುವಾರ) ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿರುವ ಟೀಸರ್ ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟೀಸರ್ 24 ಗಂಟೆಗಳಲ್ಲಿ 6.3 ಮಿಲಿಯನ್ ವೀಕ್ಷಣೆ ಪಡೆದಿದೆ. ಟೀಸರ್ ನಲ್ಲಿ ನಾನಿ ಮತ್ತು ಕೃತಿಶೆಟ್ಟಿ ನಡುವಿನ ಲಿಪ್ಲಾಕ್ ದೃಶ್ಯ ಇದೀಗ ಹಾಟ್ ಟಾಪಿಕ್ ಆಗಿದೆ.
ಟೀಸರ್ ಉದ್ದಕ್ಕೂ ಕೃತಿ ಶೆಟ್ಟಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ.. ಟೀಸರ್ ಕೊನೆಯಲ್ಲಿ ಲಿಪ್ಲಾಕ್ ದೃಶ್ಯದಲ್ಲಿ ಕಾಣಿಸಿದ್ದಾರೆ ಕೃತಿ ಶೆಟ್ಟಿ.
ಈ ಸೀನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉಪ್ಪೆನಾ ಸಿನಿಮಾ ಮೂಲಕ ಯುವಕ ಹಾರ್ಟ್ಗೆ ಗಾಳ ಹಾಕಿದ ಬೇಬಮ್ಮ, ಆ ಸಿನಿಮಾದಲ್ಲಿ ಜಲಜಲ ಜಲಪಾತಂ ನುವ್ವು ಹಾಡಿನಲ್ಲಿ ರೋಮ್ಯಾಂಟಿಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನಾನಿ ಜೊತೆ ಲಿಪ್ ಲಾಕ್ ಮಾಡಿ ಸದ್ದು ಮಾಡಿದ್ದಾರೆ.
ಮೊದಲ ಸಿನಿಮಾದಿಂದಲೇ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿರುವ ಈ ಚೆಲುವೆ, ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ.