ಐಎಸ್ಎಲ್: ಎಟಿಕೆ ಮೋಹನ್ ಬಗಾನ್ ತಂಡಕ್ಕೆ ಜಯ kerala-blasters saaksha tv
ಭರವಸೆಯ ಆಟಗಾರ ಹ್ಯೂಗೋ ಬೌಮಸ್ ಅವರು ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಎಟಿಕೆ ಮೋಹನ್ ಬಗಾನ್ ತಂಡ ಎಂಟನೇ ಆವೃತ್ತಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ 4-2 ರಿಂದ ಕೇರಳ ಬ್ಲಾರ್ಸ್ಟ್ ವಿರುದ್ಧ ಜಯ ಸಾಧಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಎಟಿಕೆ ಪರ ಹ್ಯೂಗೋ ಬೌಮಸ್ (3, 39ನೇ ನಿಮಿಷ), ಕೃಷ್ಣ (27ನೇ ನಿಮಿಷ), ಲಿಸ್ಟನ್ ಕೊಲಾಕೊ (50ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಕೇರಳ ತಂಡದ ಪರ ಸಹಲ್ ಅಬ್ದುಲ್ ಸಮದ್ (24ನೇ ನಿಮಿಷ) ಹಾಗೂ ಪೆರೇರಾ ಡಯಾಸ್ (69ನೇ ನಿಮಿಷ) ಗೋಲು ಸಿಡಿಸಿದರು.
ಆರಂಭದಲ್ಲಿ ಎಟಿಕೆ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆಯಿತು. ಆರಂಭದಲ್ಲಿ ಹ್ಯೂಗೋ ಬೌಮಸ್ ಸಿಕ್ಕ ಅವಕಾಶದಲ್ಲಿ ಗೋಲು ಸಿಡಿಸಿ ಮಿಂಚಿದರು. ಇದೇ ಅವಧಿಯಲ್ಲಿ ಕೇರಳ ಸಹ ಗೋಲು ಸಿಡಿಸಿ ಅಂತರವನ್ನು ಕಡಿಮೆ ಮಾಡಿತು.
ಆದರೆ ಮೊದಲಾವಧಿಯ 27ನೇ ನಿಮಿಷದಲ್ಲಿ ಕೃಷ್ಣ, 39ನೇ ನಿಮಿಷದಲ್ಲಿ ಹ್ಯೂಗೋ ಬೌಮಸ್ ಮತ್ತೊಮ್ಮೆ ಉತ್ತಮ ಕಾಲ್ಚಳಕದ ಪ್ರದರ್ಶನ ನೀಡಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಪರಿಣಾಮ ಎಟಿಕೆ 3-1 ರಿಂದ ಮುನ್ನಡೆ ಸಾಧಿಸಿತು
ಎರಡನೇ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲು ಸಿಡಿಸಿದವು. ಕೊನೆಯ ಕ್ಷಣದವರೆಗೂ ಗೋಲು ಸಿಡಿಸಿ ಮೋಹನ್ ಬಗಾನ್ ಗೆ ಶಾಕ್ ನೀಡಬೇಕೆಂಬ ಕೇರಳ ಆಸೆ ಫಲಿಸಲಿಲ್ಲ.