ವಾರೆವ್ಹಾ ಹರ್ಷಲ್.. ಡೆಬ್ಯೂ ಮ್ಯಾಚ್ ನಲ್ಲಿ ಶೈನಿಂಗ್..! harshal-patel saaksha tv
ಟೀಂ ಇಂಡಿಯಾದ ಬೌಲರ್ ಹರ್ಷಲ್ ಪಟೇಲ್, ಡೆಬ್ಯೂ ಮ್ಯಾಚ್ ನಲ್ಲಿ ಶೈನ್ ಆಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮ್ಯಾಚ್ ಮೂಲಕ 94 ನೇ ಆಟಗಾರರಾಗಿ ಹರ್ಷಲ್, ಟೀಂ ಇಂಡಿಯಾದ ಕ್ಯಾಪ್ ತೊಟ್ಟರು.
ಪಾದಾರ್ಪಣೆ ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಹರ್ಷಲ್ ಪಟೇಲ್ 25 ರನ್ ನೀಡಿ ಎರಡು ನಿರ್ಣಾಯಕ ವಿಕೆಟ್ ಪಡೆದರು.
ಮುಖ್ಯವಾಗಿ ಹರ್ಷಲ್ ಪ್ರತಿ ಚೆಂಡನ್ನು ಸುಮಾರು 140 ಕಿಮೀ ವೇಗದಲ್ಲಿ
ಎಸೆದಿದ್ದು, ಎಲ್ಲರ ಗಮನ ಸೆಳೆಯಿತು. ಅದೇ ರೀತಿ ತಮ್ಮ ಮೊದಲ ಪಂದ್ಯದಲ್ಲೇ ಹರ್ಷಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಿವೀಸ್ ಇನ್ನಿಂಗ್ಸ್ ಮುಗಿದ ನಂತರ, ಹರ್ಷಲ್ ಪಟೇಲ್ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದರು.
ದೇಶದ ಪರ ಆಡುತ್ತಿರೋದು ಹೆಮ್ಮೆ ಅನಿಸುತ್ತಿದೆ. ನನಗೆ ಆಟ ಇಷ್ಟ.. ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ ಎಂದು ಭಾವಿಸುತ್ತೇನೆ.
ಪಂದ್ಯಕ್ಕೂ ಮುನ್ನ ದ್ರಾವಿಡ್ ಸರ್ ನನ್ನೊಂದಿಗೆ ಮಾತನಾಡಿ, ನಿಮ್ಮ ತಯಾರಿ ಮುಗಿದಿದ್ದು, ಪಂದ್ಯದಲ್ಲಿ ವಿಕೆಟ್ ಕಬಳಿಸುವುದನ್ನು ಆನಂದಿಸಬೇಕು ಎಂದರು.
ದ್ರಾವಿಡ್ ಅವರು ಹೇಳಿದಂತೆ ಮೊದಲ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದು ಖುಷಿತಂದಿದೆ.
ಐಪಿಎಲ್ ಫಾರ್ಮ್ ಮುಂದುವರಿಸಿರುವ ನಾನು ನನ್ನ ಚೊಚ್ಚಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದಿದ್ದೇನೆ. ಈ ಪ್ರದರ್ಶನವನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.
ಅಂದಹಾಗೆ ಹರ್ಷಲ್ ಪಟೇಲ್ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಬ್ಬರಿಸಿದ್ದರು.
ಪ್ರತಿ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಐಪಿಎಲ್ ನಲ್ಲಿ ಬರೋಬ್ಬರಿ 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ.