ಟೀಂ ಇಂಡಿಯಾ ಆಫ್ರಿಕಾ ಟೂರ್.. ಶೆಡ್ಯೂಲ್ ಫಿಕ್ಸ್
ಒಮಿಕ್ರಾನ್ ವೈರಸ್ ಹಿನ್ನಲೆಯಲ್ಲಿ ತೂಗುಯ್ಯಾಲೆಯಲ್ಲಿದ್ದ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಇದೀಗ ಖರಾರಾಗಿದೆ.
ಈಗಿರುವ ಪ್ಲಾನ್ನಂತೆಯೇ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್, 3 ಏಕದಿನ ಮತ್ತು 4 ಟಿ-20 ಪಂದ್ಯಗಳನ್ನು ಆಡಬೇಕಿತ್ತು.
ಆದರೆ ಈಗ ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಸರಣಿಗಳು ನಡೆಯಲಿವೆ. ಟಿ-20 ಸರಣಿಯನ್ನು ಮುಂದೂಡಲಾಗಿದೆ.
ಇನ್ನು ನಿಗದಿಯಂತೆ ಡಿಸೆಂಬರ್ 26 ರಂದು ಟೆಸ್ಟ್ ಸರಣಿಯು ಪ್ರಾರಂಭವಾಗಲಿದೆ. ಟೀಂ ಇಂಡಿಯಾ ಪ್ರವಾಸದ ಹಿನ್ನೆಲೆಯಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯ ಹೊಸ ವೇಳಾಪಟ್ಟಿಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ಪ್ರಕಟಿಸಿದೆ.
ದಕ್ಷಿಣ ಆಫ್ರಿಕಾ – ಟೀಮ್ ಇಂಡಿಯಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್ – ಸೆಂಚುರಿಯನ್ ಮೈದಾನಲ್ಲಿ ಡಿಸೆಂಬರ್ 26 ರಿಂದ 30 ವರೆಗೆ
ಎರಡನೇ ಟೆಸ್ಟ್ – ಜೋಹಾನ್ಸ್ಬರ್ಗ್ ನಲ್ಲಿ ಜನವರಿ 03 ರಿಂದ 7ರ ವರೆಗೆ
ಮೂರನೇ ಟೆಸ್ಟ್ – ಕೇಪ್ ಟೌನ್ ನಲ್ಲಿ ಜನವರಿ 11 ರಿಂದ 15 ವರೆಗೆ ನಡೆಯಲಿದೆ.
ಏಕದಿನ ಸರಣಿ ವೇಳಾಪಟ್ಟಿ ಹೀಗಿದೆ
ಜನವರಿ 19 ರಂದು ಪಾರ್ಕ್-ಪರ್ಲ್ ನಲ್ಲಿ ಮೊದಲ ಏಕದಿನ ಪಂದ್ಯ. ಜನವರಿ 21 ರಂದು ಎರಡನೇ ಒಂಡೇ ಮ್ಯಾಚ್, ಪಾರ್ಕ್-ಪರ್ಲ್ ನಲ್ಲಿ. ಜನವರಿ 23 ರಂದು ಕೇಪ್ ಟೌನ್ ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ.









