ವಿದ್ಯುತ್ ತಂತಿ ತಗುಲಿ 5 ಎಕರೆ ಕಬ್ಬು ನಾಶ
ಚಾಮರಾಜನಗರ : ಜಿಲ್ಲೆಯ ಬೂದಿತಿಟ್ಟು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಸುಮಾರು 5 ಎಕರೆ ಕಬ್ಬು ಮತ್ತು 15 ತೆಂಗಿನ ಮರಗಳು ಸುಟ್ಟು ಭಸ್ಮವಾಗಿವೆ.
ಮರಿಸ್ವಾಮಿ, ಬಸವಣ್ಣ, ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ಜೋತು ಬಿದ್ದ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ.
ಇದನ್ನ ಗಮನಿಸಿದ ಜಮೀನಿನ ಸುತ್ತಮುತ್ತಲಿನ ರೈತರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.









