ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಆತ್ಮಹತ್ಯೆ chamarajanagara saaksha tv
ಚಾಮರಾಜನಗರ : ಪತ್ನಿಯನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಉಪಕಾರಾಗೃಹದಲ್ಲಿ ನಡೆದಿದೆ.
42 ವರ್ಷದ ಉತ್ತುವಳ್ಳಿ ಗ್ರಾಮದ ಮಂಜು ಆತ್ಮಹತ್ಯೆ ಮಾಡಿಕೊಂಡ ಕೈದಿಯಾಗಿದ್ದಾರೆ.
2017 ರ ಅಕ್ಟೋಬರ್ ನಲ್ಲಿ ಮಂಜು ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ.
ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಡಿಸೆಂಬರ್ 08 ರಂದು ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿತ್ತು.
ಇದರಿಂದ ಜಿಗುಪ್ಸೆಗೊಂಡಿದ್ದ ಮಂಜು ಜೈಲಿನ ಮಹಡಿ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.









