ಒಮಿಕ್ರಾನ್ ಕಂಟಕ ದೂರವಾಗಲೆಂದು ಶನೇಶ್ವರಸ್ವಾಮಿ ಮಹಾಯಾಗ Shaneshwaraswamy saaksha tv
ಬೆಂಗಳೂರು : ಮಾಯಾವಿ ಒಮೈಕ್ರಾನ್ ಸೋಂಕು ರಾಜ್ಯವನ್ನು ಅತಿಹೆಚ್ಚು ಬಾದಿಸುತ್ತಿದೆ.ಹೀಗಾಗಿ ಕೊರೋನಾ ರೂಪಾಂತರಿ ಒಮೈಕ್ರಾನ್ ವೈರಸ್ ಆತಂಕ ದೂರವಾಗಿ ಲೋಕ ಕಲ್ಯಾಣವಾಗಲಿ ಅಂತ ಶನೇಶ್ವರಸ್ವಾಮಿ ಮಹಾಯಾಗ ನಡೆಸಲಾಗಿದೆ.
ನಗರದ ಟಿ ದಾಸರಹಳ್ಳಿಯ ಗುರು ಶನೈಶ್ಚೇರ ಸ್ವಾಮಿ ದೇವಸ್ಥಾನದಲ್ಲಿ ಮಹಾಯಾಗ ಕಾರ್ಯಕ್ರಮ ನಡೆದಿದೆ.
ದೇವಸ್ಥಾನದ ಸಂಸ್ಥಾಪಕರಾದ ಸುಬ್ಬರಾಯ ಆಚಾರ್ ಸ್ವಾಮೀಜಿ ನೇತ್ರತ್ವದಲ್ಲಿ ನಡೆದ ಮಹಾಯಾಗ ಇಂದು ಪೂರ್ಣಾಹುತಿ ನಡೆದಿದೆ. ನಾಳೆ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ.
ಕೊರೋನಾ ಆತಂಕದ ನಡುವೆ ದೇಶದಲ್ಲಿ ಆತಂಕ ಹೆಚ್ಚಾಗಿದೆ. ಜನರು ಒಂದು ವರ್ಷ ಕೆಲಸವಿಲ್ಲದೇ ಪರದಾಡುವಂತಾಗಿದೆ.ಸದ್ಯಕ್ಕೆ ಒಮಿಕ್ರಾನ್ ಆತಂಕ ಹೆಚ್ಚು ಜನರನ್ನ ಕಾಡುತ್ತಿದೆ.
ಹೀಗಾಗಿ ಕೊರೋನಾ ಭಯದಿಂದ ಮಿಮುಖರಾಗಿ, ಮೂರನೇ ಅಲೆ ಜನರನ್ನ ಕಾಡದಂತಾಗಬೇಕು.ನಾಡು ಸುಭೀಕ್ಷೆಯಿಂದ ಕೂಡಿರಲಿ ಅಂತ ಮಹಾಯಾಗ ಮಾಡಿ ಪ್ರಾರ್ಥಿಸಲಾಯ್ತು.
ಈ ಸಂದರ್ಭದಲ್ಲಿ ಮಹಾಯಾಗದ ಆಯೋಜಕರಾದ ರಮೇಶ್ , ಆಶ್ವಿನಿ ಭೂಷಣ್, ನೀಲಕಂಠಾಚಾರ್ಯ ಸ್ವಾಮೀಜಿ ಬಿಜೆಪಿ ಮುಖಂಡರಾದ ಮುನಿರಾಜು, ಲೋಕೇಶ್ ಉಪಸ್ಥಿತರಿದ್ದರು









