ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ : ರೂಟ್ ಗೆ ಪಾಂಟಿಂಗ್ ಕ್ಯಾಪ್ಟನ್ಸಿ ಕ್ಲಾಸ್ Ponting saaksha tv
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ ಆಸ್ಟ್ರೇಲಿಯಾ ತಂಡವನ್ನು ವಿಶ್ವ ಕ್ರಿಕೆಟ್ ನ ಕಿಂಗ್ ಆಗಿ ಮೆರೆಸಿದ್ದು, ರಿಕಿ ಪಾಂಟಿಂಗ್ ನಾಯಕತ್ವ. ಆಸ್ಟ್ರೇಲಿಯಾ ತಂಡಕ್ಕೆ ಹ್ಯಾಟಿಕ್ ವಿಶ್ವಕಪ್ ತಂದುಕೊಟ್ಟಿದ್ದು, ಎರಡೆರಡು ವಿಶ್ವಕಪ್ ಗಳಿಗೆ ಮುತ್ತಿಟ್ಟಿದ್ದು, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನುಗೆದ್ದುಕೊಂಡಿದ್ದು ಒನ್ ಅಂಡ್ ಓನ್ಲಿ ರಿಕಿ ಪಾಂಟಿಂಗ್.
ಆಕ್ರಮಣಕಾರಿ ಪ್ರೌರುತ್ತಿರುವ ಪಾಂಟಿಂಗ್, ಟೀಂ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದ ರೀತಿ ನಃ ಭೂತೋ ನಃ ಭವಿಷ್ಯತಿ. ಅದು ಸ್ವದೇಶಿ ಇರಲಿ, ವಿದೇಶವಿರಲಿ ರಿಕಿ ಪಾಂಟಿಂಗ್ ನಾಯಕತ್ವದ ವೈಖರಿಯಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಕೊನೆಯ ಬಾಲ್, ಕೊನೆಯ ವಿಕೆಟ್ ವರೆಗೂ ಕೇವಲ ಗೆಲುವಿಗಾಗಿ ಹೋರಾಡಬೇಕು ಅನ್ನೋದನ್ನ ಇತರರಿಗೆ ತೋರಿಸಿಕೊಟ್ಟವರು ಪಾಂಟಿಂಗ್.
ಇಂತಹ ಪಾಂಟಿಂಗ್ ಈಗ ಆಶಸ್ ಸರಣಿಯಲ್ಲಿ ಸೋತು ಸೋತು ಸುಣ್ಣವಾಗಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಗೆ ಕ್ಯಾಪ್ಟನ್ಸಿ ಪಾಠ ಮಾಡಿದ್ದಾರೆ.
ಹೌದು..! ಇಂಗ್ಲೆಂಡ್ ಪರ ಜೋ ರೂಟ್ ನಾಯಕನಾಗಿ 58 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಗೆಲುವು ಪಡೆಯುವ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಆದರೆ, ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ನಾಯಕನಾಗಿ ಗರಿಷ್ಠ ಸೋಲು ಪಡೆದ ನಾಯಕ ಎಂಬ ಬೇಡದ ದಾಖಲೆಗೂ ಪಾತ್ರರಾಗಿದ್ದಾರೆ.
ಇನ್ನು ಅಡಿಲೇಡ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಜೋ ರೂಟ್, ನಮ್ಮ ಬೌಲರ್ ಗಳು ನಿರ್ಧಿಷ್ಠವಾಗಿ ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದೇ ನಮ್ಮ ಹಿನ್ನಡೆಗೆ ಕಾರಣವಾಗಿದೆ ಎಂದಿದ್ದರು. ಇದಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದು, ರೂಟ್ ಗೆ ಕ್ಯಾಪ್ಟನ್ಸಿ ಕ್ಲಾಸ್ ಪಡೆದುಕೊಂಡಿದ್ದಾರೆ.
ರೂಟ್ ಮಾತುಗಳಿಂದ ನಾನು ಶಾಕ್ ಗೆ ಒಳಗಾಗಿದ್ದೇನೆ. ಬೌಲರ್ ಗಳನ್ನ ಬದಲಿಸಬೇಕಾಗಿರುವುದು ಯಾರು..? ನೀನು ಕ್ಯಾಪ್ಟನ್ ಆಗಿದ್ದು ಮೈದಾನದಲ್ಲಿ ಏನ್ ಮಾಡ್ತಿದ್ದೀಯಾ..? ಬೌಲರ್ಸ್ ಲೈನ್ ಅಂಡ್ ಲೆಂಥ್ ಬಗ್ಗೆ ಸಲಹೆ ಕೊಡಬೇಕಾಗಿರುವವರು ಯಾರು..? ಎಂದು ಪಾಂಟಿಂಗ್ ಪ್ರಶ್ನಿಸಿದ್ದಾರೆ.
ಅಲ್ಲದೇ ಒಬ್ಬ ಕ್ಯಾಪ್ಟನ್ ಆಗಿ ನಿನಗೆ ಹೇಗೆ ಬೇಕೋ ಹಾಗೇ ಬೌಲಿಂಗ್ ಮಾಡಿಸಿಕೊಳ್ಳಬೇಕು. ನಿನ್ನ ಮಾತಿಗೆ ತಕ್ಕಂಥೆ ಬೌಲಿಂಗ್ ಮಾಡುತ್ತಿಲ್ಲ ಅಂದ್ರೆ ಬೌಲರ್ ಗಳನ್ನ ಬದಲಾವಣೆ ಮಾಡಬೇಕು. ನಿನ್ನ ವ್ಯೂಹವನ್ನ ಜಾರಿ ಮಾಡುವಂತಹ ಬೌಲರ್ ಗಳನ್ನ ಮೈದಾನಕ್ಕೆ ಇಳಿಸಬೇಕು. ಬೌಲರ್ ಗಳ ಜೊತೆ ಮೊದಲು ಮುಕ್ತವಾಗಿ ಮಾತನಾಡಬೇಕು. ಅದು ಕ್ಯಾಪ್ಟನ್ಸಿ ಅಂದರೇ ಎಂದು ರಿಕಿ ಕ್ಲಾಸ್ ತೆಗೆದುಕೊಂಡಿದ್ದಾರೆ.









