ಮೈಶುಗರ್ ಕಾರ್ಖಾನೆಯಲ್ಲಿನ ಉಪಕರಣಗಳ ಹಗಲು ದರೋಡೆ
ಮಂಡ್ಯ : ಮೈಶುಗರ್ ಕಾರ್ಖಾನೆ ಯಲ್ಲಿರುವ ಉಪಕರಣಗಳನ್ನ ಹಗಲು ದರೋಡೆ ಮಾಡಿದ್ದಾರೆ.
ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಹೋರಾಟ ಮಾಡಿದ್ರು, ಸರ್ಕಾರ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಮೈಶುಗರ್ ಯಂತ್ರ ಕಳ್ಳ ಸಾಗಾಣಿಕೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಸುದ್ದಿಗೋಷ್ಟಿ ನಡೆಸಿತು.
ಈ ವೇಳೆ ಮಾತನಾಡಿದ ಸುನಂದಾ ಜಯರಾಂ ಅವರು, PSSK ಕಾರ್ಖಾನೆ ಸಿಬ್ಬಂದಿಗಳು ಅತಿಕ್ರಮ ಪ್ರವೇಶ ಮಾಡಿದ್ದಾರೆ.
ಮೈಶುಗರ್ ಕಾರ್ಖಾನೆ ಯಲ್ಲಿರುವ ಉಪಕರಣಗಳನ್ನ ಹಗಲು ದರೋಡೆ ಮಾಡಿದ್ದಾರೆ.
ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಹೋರಾಟ ಮಾಡಿದ್ರು, ಸರ್ಕಾರ ನಿರ್ಲಕ್ಷ್ಯ ತೋರಿದ್ದಾರೆ..
ಟರ್ಬೈನ್ ಗವರ್ನರ್ ಯಂತ್ರವನ್ನ ಸಾಲ ಕೇಳ್ತಿದ್ದಾರೆ. ನಮ್ಮ ಯಂತ್ರವನ್ನ ಕೊಡಲು ಯಾರ ಗಮನಕ್ಕೂ ತಂದಿಲ್ಲ.
ಮೈಶುಗರ್ ಹಾಳು ಮಾಡಲು ಎಲ್ಲರು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಇನ್ನು ಜನ ಪ್ರತಿನಿಧಿಗಳು ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಹಗಲು ದರೋಡೆ ಮಾಡಿದವರ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು.
ಮೈಶುಗರ್ ಕಾರ್ಖಾನೆ ವಸ್ತುಗಳು ಎಷ್ಟು ಹೋಗಿರಬಹುದು ಶೀಘ್ರವಾಗಿ ತನಿಖೆಯಾಗಬೇಕು ಎಂದು ಮೈಶುಗರ್ ಅಧ್ಯಕ್ಷ ಹಾಗೂ ಸರ್ಕಾರದ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಆಕ್ರೋಶ ಹೊರಹಾಕಿದೆ.









