ಅಹ್ಮದಾಬಾದ್ ತಂಡಕ್ಕೆ `ಗ್ಯಾರಿ ಕ್ರಿಸ್ಟನ್’ ಗುರು.. gary-kirsten saaksha tv
ಐಪಿಎಲ್ ನ ಹೊಸ ಫ್ರಾಂಚೈಸಿ ಅಹ್ಮದಾಬಾದ್ ತಂಡಕ್ಕೆ ದಕ್ಷಿಣಾ ಆಫ್ರಿಕಾದ ಮಾಜಿ ಕ್ರಿಕೆಟರ್ ಗ್ಯಾರಿ ಕ್ರಿಸ್ಟನ್ ಮುಖ್ಯ ಕೋಚ್ ಆಗುವ ಸಾಧ್ಯತೆಗಳಿವೆ.
ಈ ಕುರಿತು ಅಹ್ಮದಾಬಾದ್ ಫ್ರಾಂಚೈಸಿ ಗ್ಯಾರಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ವಿಶ್ವಕಪ್ ಗೆದ್ದ ಗ್ಯಾರಿ ಆ ಬಳಿಕ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿದ್ದರು.
ಇದಾದ ಬಳಿಕ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ತಂಡಕ್ಕೂ ಗ್ಯಾರಿ ಕೋಚ್ ಆಗಿದ್ದರು.
ಇದಲ್ಲದೇ ಅಹ್ಮದಾಬಾದ್ ತಂಡದ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ನೇಮಕ ಆಗುವ ಸಾಧ್ಯತೆಗಳಿವೆ.
ನೆಹ್ರಾ ಈ ಹಿಂದೆ ಆರ್ ಸಿಬಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿದ್ದರು.








