ಮೈಸೂರಿನ ಮಹಾರಾಣಿ ಕಾಲೇಜಿನಲಿದ್ದ ಹಾವಿನ ರಕ್ಷಣೆ Maharani College saaksha tv
ಮೈಸೂರು : ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಉರಗ ಸಂರಕ್ಷಕ ಸೂರ್ಯಕೀರ್ತಿ ಅವರು ಹಾವನ್ನ ರಕ್ಷಣೆ ಮಾಡಿದ್ಧಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲಿರುವ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಇಂದು ಕೆ ಪಿ ಎಸ್ ಸಿ ಪರೀಕ್ಷೆ ನಿಗಧಿಯಾಗಿತ್ತು.
ಪರೀಕ್ಷೆ ಆರಂಭಕ್ಕೂ ಮುನ್ನ ಹಾವು ಕಾಣಿಸಿಕೊಂಡಿದ್ದು, ಕಾಲೇಜಿನ ಸಿಬ್ಬಂದಿ ಕೂಡಲೇ ಖ್ಯಾತ ಉರಗ ಸಂರಕ್ಷಕ ಸೂರ್ಯಕೀರ್ತಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸೂರ್ಯಕೀರ್ತಿ ಅಡಗಿಗೊಂಡಿದ್ದ ಹಾವಿನ ರಕ್ಷಣೆ ಮಾಡಿದ್ದಾರೆ.









