ಚಾಮರಾಜನಗರ | ಹಸು ಕಳ್ಳರನ್ನು ಹಿಡಿದ ರೈತರು chamarajanagara saaksha tv
ಚಾಮರಾಜನಗರ : ಜಾನುವಾರುಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಾಮರಾಜನಗರದ ಹನೂರು ಒಂಟಮಾಲಪುರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕೋಳಿಪಾಳ್ಯದ ಸಿದ್ದರಾಜು (23), ಗುಂಡಾಪುರ ಗ್ರಾಮದ ಜ್ಯೋತಿ ಬಸು (28) ಎಂದು ಗುರುತಿಸಲಾಗಿದೆ.
ಇನ್ನು ಮತೋರ್ವ ಗೋವಿಂದ( 18) ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇವರು ಹನೂರು ಪಟ್ಟಣದ ವಾಸಿ ಗೋವಿಂದ ಎಂಬಾತನ ಹಸುಗಳನ್ನು ಕದ್ದಿದ್ದು, ಎಂದಿನಂತೇ ಹಸುಗಳನ್ನು ಮೇಯಿಸಲು ಬಿಟ್ಟಿದ್ದರಂತೆ.
ಇವರ ಚಲನವಲನವನ್ನು ಗಮನಿಸಿದ ಸ್ಥಳೀಯರು ಇವರನ್ನು ಪ್ರಶ್ನೆ ಮಾಡಿದ್ದಾಗ ಕದ್ದು ಪರಾರಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣವೇ ನೆರೆಹೊರೆಯ ರೈತರು ಧಾವಿಸಿ ಕಳ್ಳರಿಗೆ ಚಳಿ ಬಿಡಿಸಿ ತಕ್ಷಣವೇ ಹನೂರು ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ.









