ಬೈಕ್ ನಿಂದ ಬಿದ್ದು ಖಾಸಗಿ ಕಾಲೇಜಿನ ಉಪನ್ಯಾಸಕ ಸಾವು hassan saaksha tv
ಹಾಸನ : ಬೈಕ್ ಯಿಂದ ಬಿದ್ದು ಖಾಸಗಿ ಕಾಲೇಜಿನ ಉಪನ್ಯಾಸಕ ಮೃತಪಟ್ಟಿರುವ ಘಟನೆ ಹಾಸನದ ಗೊರೂರಿನ ಸಮೀಪ ನಡೆದಿದೆ.
39 ವರ್ಷದ ಸೋಮಶೇಖರ್ ಮೃತ ದುರ್ದೈವಿಯಾಗಿದ್ದಾರೆ.
ಸೋಮಶೇಖರ್ ಹಾಸನದ ಶ್ರೀರಂಗ ಬಿಎಡ್ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿದ್ದರು ಎಂದು ತಿಳಿದುಬಂದಿದೆ.
ಹಾಸನ ತಾಲ್ಲೂಕಿನ ಗೊರೂರಿನ ಸಮೀಪ ಬುಧವಾರ ಸೋಮಶೇಖರ್ ಬೈಕ್ ಯಿಂದ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
ಆದರೇ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.









