ಅತಿ ಬಡವ ರಾಷ್ಟ್ರವೇ ಆದ್ರೂ ಖುಷಾಲ ರಾಷ್ಟ್ರ ಉಗಾಂಡಾ…Interesting Facts
ಉಗಾಂಡಾ (Uganda)… ಆಫ್ರಿಕಾದ ಈ ಸುಂದರ ದೇಶದ ಬಗ್ಗೆ ತಿಳಿಯಲೇಬೇಕಾದ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ.. ಈ ದೇಶ ಇತರೇ ದೇಶಗಳಿಗಿಂತಲೂ ಸಾಕಷ್ಟು ವಿಚಾರಗಳಿಂದ ವಿಭಿನ್ನವಾಗಿದೆ..
ಈ ದೇಶ ಶ್ರೀಮಂತವಲ್ಲದೇ ಇದ್ರೂ , ಜನರ ಬಳಿ ಹೆಚ್ಚು ದುಡ್ಡು ಇಲ್ಲದೇ ಇದ್ರೂ ಸಹ , ಇಲ್ಲಿನ ಜನರು ಹೆಚ್ಚಾಗಿ ಸದಾ ಖುಷಿಯಾಗಿಯೇ ಇರುತ್ತಾರೆ..
ಉಗಾಂಡಾದ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಯುಗಾಂಡಾ..
ಈ ದೇಶದಲ್ಲಿ ಒಟ್ಟು 5 ಗಡಿ ಭಾಗಗಳಿವೆ.. ಅಂದ್ರೆ ರವಾಂಡಾ , ತಂಜಾನಿಯಾ , ಸೌತ್ ಸುಡಾನ್ , ಕೀನಿಯಾ, ಡೆಮೊಕ್ರೇಟಿಕ್ ರಿಪಬ್ಲಿಕ್ ಆಫ್ ಕಾಂಗೋ ಜೊತೆಗೆ ಗಡಿ ಹಂಚಿಕೊಂಡಿದೆ..
ರಾಜಧಾನಿ : ಕಂಪಾಲಾ – ಇಲ್ಲಿನ ಅತಿ ದೊಡ್ಡ ಸಿಟಿಯೂ ಕೂಡ.. ದೇಶದ ಒಟ್ಟಾರೆ ಜನಸಂಖ್ಯೆಯ ಸುಮಾರು 20 % ರಷ್ಟು ಜನರು ಈ ನಗರದಲ್ಲಿ ವಾಸವಾಗಿದ್ದಾರೆ..
ಅಂದ್ಹಾಗೆ 19972 ಕ್ಕೂ ಮೊದಲು ಭಾರತ ಹಾಗೂ ಉಗಾಂಡಾ ನಡುವೆ ಉತ್ತಮ ಸಂಬಂಧವಿತ್ತು.. ಆದ್ರೆ ಅದಾದ ನಂತರ ಅಲ್ಲಿನ ಸರ್ಕಾರದ ಆದೇಶದಂತೆ ಭಾರರತೀಯರು ಆ ದೇಶವನ್ನ ಬಿಡಬೇಕಾಯಿತು.. ಅಲ್ಲಿಂದ ಭಾರತ ಹಾಗೂ ಉಗಾಂಡಾ ನಡುವಿನ ಸಂಬಂಧ ಅಷ್ಟು ಗಟ್ಟಿಯಾಗಿಲ್ಲ.. ಮೊದಲಿನಂತೆ ಇಲ್ಲ..
ಇಂದಿಗೂ ಉಗಾಂಡಾದಲ್ಲಿ ಏಷ್ಯಾ ಮೂಲದವರು ದೊಡ್ಡ ಸಂಖ್ಯೆಯಲ್ಲಿ ವಾಸವಾಗಿದ್ದಾರೆ..
ಇಲ್ಲಿನ ಕಾಫಿ ವರ್ಲ್ಡ್ ಫೇಮಸ್..
ಯುಗಾಂಡಾದಲ್ಲಿ ಮೊದಲು ಜನರನ್ನ ಭೇಟಿಯಾದ ತಕ್ಷಣ “ ಹೇಗಿದ್ದೀರಾ ( HOW are You ) ಅಂತ ಕೇಳುವುದು ತುಂಬಾ ಮುಖ್ಯ.. ಅನಿವಾರ್ಯವೂ.. ಒಂದು ವೇಳೆ ಹೀಗೆ ಕೇಳದೇ ಇದ್ದಲ್ಲಿ , ಅವರಿಗೆ ನಮ್ಮ ಒಳಿತು ಇಷ್ಟ ಇಲ್ಲ ಎಂದು ಪರಿಗಣಿಸುತ್ತಾರಂತೆ Uganda ಜನರು..
ಈ ದೇಶದಲ್ಲಿ ಯಾರೂ ಕೂಡ ಹಾಫ್ ಪ್ಯಾಂಟ್ ( ಮೊಣಕಾಲಿನಿಂದ ಮೇಲೆ ) ಧರಿಸುವುದಿಲ್ಲ.. ಈ ದೇಶದಲ್ಲಿ ಸುಮಾರು 80%ಮನೆಗಳು ಮಣ್ಣಿನಿಂದ ನಿರ್ಮಾಣವಾಗಿರೋದು ಕಂಡು ಬರುವುದು.. ಕಾರಣ ಇಲ್ಲಿನ ಜನಸಂಖ್ಯೆಯ ಸುಮಾರು 75 % ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ..
ಕುಂಠು ಮಿಡತೆಯನ್ನ ಈ ದೇಶದ ಜನರು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ..
ಈ ದೇಶದ ಉತ್ತಮ ವಿಚಾರ ಅಥವ ಕಾನೂನೆಂದರೆ , ಒಂದು ಮರ ಕಡೆದರೆ ಅದೇ ಸಮಯಕ್ಕೆ 33 ಗಿಡಗಳನ್ನ ನೆಡುವುದು ಕಡ್ಡಾಯ..
ವಿಶ್ವದ ಒಟ್ಟಾರೆ ಪಕ್ಷಿಗಳ ಸಂಖ್ಯೆಯಲ್ಲಿ ಸುಮಾರು 11% ರಷ್ಟು ಉಗಾಂಡಾದಲ್ಲಿಯೇ ಇದೆ..
ವಿಶ್ವದ ಅತ್ಯಂತ ಭಯಂಕರ ಮಿಲಿಟರಿ ಸರ್ವಾಧಿಕಾರಿಗಳ ಪೈಕಿ ಒಬ್ಬನಾದ ಇಡಿ ಆಮಿನ್ ಇದೇ ದೇಶದವನು..
ಈ ರಾಕ್ಷಸ ಸರ್ವಾಧಿಕಾರಿ ಬಗ್ಗೆ ಒಂದು ಸಂಬಲಾಸಾಧ್ಯವಾದ ವದಂತಿ ಅಂದ್ರೆ ಈತ ಮಂಗಗಳಿಂದ ಹಿಡಿದು ಮನುಷ್ಯರ ಮಾಂಸವನ್ನೂ ಸಹ ಸೇವಿಸುತ್ತಿದ್ದ ಎನ್ನಲಾಗುತ್ತೆ..
ಕೆಲ ವರದಿಗಳ ಪ್ರಕಾರ ಈತನ ಆಳ್ವಿಕೆಯ ಅವಧಿಯಲ್ಲಿ ಸುಮಾರು 1 – 5 ಲಕ್ಷ ಮಂದಿಯನ್ನ ಅಮಾನುಷವಾಗಿ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ..
ಈ ದೇಶ ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪೈಕಿ ಒಂದು..
ಈ ದೇಶದಲ್ಲಿ ಅತಿ ಹೆಚ್ಚು ಜನರು HIVಗೆ ತುತ್ತಾಗಿದ್ದಾರೆ.. ಮುಖ್ಯವಾಗಿ ಇಲ್ಲಿನ ಜನರು ಹೆಚ್ಚು ಅವಿದ್ಯಾವಂತರಾಗಿದ್ದು, ವಿದ್ಯಾಭ್ಯಾಸದ , ಜ್ಞಾನದ ಕೊರತೆ ಇದಕ್ಕೆ ಪ್ರಮುಖ ಕಾರಣ..
ಈ ದೇಶದ ಆರ್ಥಿಕತೆಯ ಪ್ರಮುಖ ಮೂಲ ಕೃಷಿ.. ಕಾಫಿಯನ್ನ ಅತಿ ಹೆಚ್ಚಾಗಿ ಬೆಳೆದು ವಿಶ್ವಾದ್ಯಂತ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ..
ಭಾರತದ ನಂತರ ಬಾಳೆ ಹಣ್ಣನ್ನು ಅತಿ ಹೆಚ್ಚು ರಫ್ತು ಮಾಡುವ ವಿಶ್ವದ 2ನೇ ದೇಶ ಉಗಾಂಡಾ..
ಆಫ್ರಿಕಾದ ಫೇಮಸ್ ನದಿ ನೈಲ್ ಕೂಡ ಇಲ್ಲಿಂದಲೇ ಹರಿಯುತ್ತದೆ.. ಉಗಾಂಡಾದ ಸಫಾರಿ ಲೈಫ್ ವಿಶ್ವದ ಹಾಗೂ ಆಫ್ರಿಕಾದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ..
ಇಲ್ಲಿನ ಸೆಸಿ ಐಲ್ಯಾಂಡ್ ಅತ್ಯಂತ ಡೇಂಜರಸ್ ದ್ವೀಪ ಎಂದೇ ಪರಿಗಣಿಸಲಾಗಿದೆ.. ಕಾರಣ ಇಲ್ಲಿನ ಡೆಡ್ಲಿ ಪ್ರಾಣಿಗಳು.. ಅದ್ರಲ್ಲೂ ಮೊಸಳೆಗಳು ಇಲ್ಲಿ ಹೆಚ್ಚಾಗಿದ್ದು, ಅನೇಕ ಬಾರಿ ಪ್ರವಾಸಿಗರ ಮೇಲೆ ದಾಳಿ ಮಾಡಿರೋದು ಉಂಟು..
ಇಲ್ಲಿನ ಕರೆನ್ಸಿ – ಯುಗಾಂಡಾನ್ ಶೀಲಿಂಗ್
1 ಯುಗಾಂಡಾನ್ ಶೀಲಿಂಗ್ ಭಾರತದ 0.21 ರೂಪಾಯಿಗಳಿಗೆ ಸಮ ..