12 ಬೌಂಡರಿ.. 5 ಸಿಕ್ಸರ್ಸ್.. ಬಿಗ್ ಬ್ಯಾಷ್ ನಲ್ಲಿ ‘ಬೆನ್ ಬಿಗ್ ಶೋ’ big-bash-league
ಬಿಗ್ ಬ್ಯಾಷ್ ಲೀಗ್ ನಲ್ಲಿ ಹಾಬರ್ಟ್ ಹರಿಕೇನ್ಸ್ ಬ್ಯಾಟರ್ ಬೆನ್ ಮೆಕ್ಡರ್ಮಾಟ್ ಮಿಂಚಿನ ಪ್ರದರ್ಶನ ತೋರಿದ್ದಾರೆ.
ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಬೆನ್ ಮೆಕ್ಡರ್ಮಾಟ್ 60 ಎಸೆತಗಳಲ್ಲಿ 110 ರನ್ ಗಳಿಸಿ ಅಜೇಯರಾಗಿದ್ದಾರೆ.
ಅವರ ಈ ಸ್ಫೋಟಕ ಇನ್ನಿಂಗ್ಸ್ ನಲ್ಲಿ 12 ಬೌಂಡರಿ.. 5 ಸಿಕ್ಸರ್ಸ್ ಇವೆ. ಮೊದಲ 50 ರನ್ ಗಳನ್ನು 36 ಎಸೆತಗಳಲ್ಲಿ ದಾಖಲಿಸಿದ ಬೆನ್, ನಂತರ 24 ಎಸೆತಗಳಲ್ಲಿ 60 ರನ್ ಚಚ್ಚಿಬಿಸಾಕಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಡಿಲೇಡ್ ಸ್ಟ್ರೈಕರ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.
ಅಡಿಲೇಡ್ ಪರ ರೆನ್ಶಾ (63) ಮತ್ತು ವೆದರ್ರಾಲ್ಡ್ (51) ರನ್ ಗಳಿಸಿದರು.
ಹಾಬರ್ಟ್ ಬೌಲರ್ಗಳಲ್ಲಿ ರಿಲೆ ಮೆರೆಡಿತ್ ಮೂರು ವಿಕೆಟ್ ಪಡೆದರೆ, ರೋಜರ್ಸ್ ಮತ್ತು ಇಲ್ಸ್ ಚೆರೋ ತಲಾ ಒಂದು ವಿಕೆಟ್ ಪಡೆದರು.
ಇನ್ನು 176 ರನ್ ಗುರಿಯನ್ನು ಬೆನ್ನಟ್ಟಿದ ಹಾಬರ್ಟ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿತು.
ಈ ವೇಳೆ ಬೆನ್ ಮೆಕ್ಡರ್ಮಾಟ್ ಮತ್ತು ಡಿಆರ್ಸಿ ಷಾರ್ಟ್ಸ್ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 81 ರನ್ ಗಳ ಜೊತೆಯಾಟವಾಡಿತು.
ಡಿಆರ್ಸಿ ಔಟ್ ಆದ ಬಳಿಕ ಬಿರುಗಾಳಿಯ ಆಟವಾಡಿದ ಬೆನ್, ಸೆಂಚೂರಿ ಸಿಡಿಸಿ ಮಿಂಚಿದರು.
ಇವರ ತುಫಾನಿ ಇನ್ನಿಂಗ್ಸ್ ಪರಿಣಾಮವಾಗಿ ಹಾಬರ್ಟ್ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿತು.