ಸೆಲ್ಫಿ ಶೋಕಿಗೆ ವಿದ್ಯಾರ್ಥಿ ನೀರುಪಾಲು hogenakal falls saaksha tv
ಚಾಮರಾಜನಗರ : ಸೆಲ್ಫಿ ಶೋಕಿಗೆ ವಿದ್ಯಾರ್ಥಿವೊಬ್ಬ ನೀರುಪಾಲಾಗಿರುವ ಘಟನೆ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ. 19 ವರ್ಷದ ಉಮಾಶಂಕರ್ ಮೃತ ವಿದ್ಯಾರ್ಥಿಯಾಗಿದ್ದು, ಮೈಸೂರು ಮೂಲದ ನಿವಾಸಿ ಎಂದು ತಿಳಿದುಬಂದಿದೆ.
ನರ್ಸಿಂಗ್ ಓದುತ್ತಿದ್ದ ಉಮಾಶಂಕರ್ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಜತೆ ಗುರುವಾರ ಹೊಗೆನಕಲ್ ಫಾಲ್ಸ್ಗೆ ತೆರಳಿದ್ದರು.
ಪ್ರವಾಸದ ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್, ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿ ಸ್ನೇಹಿತರಿಗೆ ಫೋಟೋ ತೆಗೆಯುವಂತೆ ಹೇಳಿದ್ದಾನೆ.
ಇದಾದ ಬಳಿಕ ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ವೇಳೆ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.









