Cooking : ಟೇಸ್ಟಿ ವೆನ್ನಿಲ್ಲಾ ಐಸ್ ಕ್ರೀಮ್ ಮನೆಯಲ್ಲೇ ತಯಾರಿಸಬಹುದು…!!! ರೆಸಿಪಿ ನೋಡಿ….
ಬೇಕಾಗುವ ಪದಾರ್ಥ:
ಹಾಲು – 3 ಕಪ್
ಮಿಲ್ಕ್ ಮೇಡ್ – 1 ಕಪ್
ಕಸ್ಟರ್ಡ್ ಪೌಡರ್ – 2 ಚಮಚ
ವಿಪ್ಪಿಂಗ್ ಕ್ರೀಮ್ 150 ಗ್ರಾಂ
ವೆನಿಲ್ಲಾ ಎಸೆನ್ಸ್ – 1 ಚಮಚ
ಮೊದಲನೆಯದಾಗಿ ಹಾಲನ್ನು ಚೆನ್ನಾಗಿ ಕಾಯಿಸಿ. ಹಾಲು ಕುದಿ ಬಂದಾಗ ಅದಕ್ಕೆ ಎರಡು ಚಮಚ ಕಸ್ಟರ್ಡ್ ಪೌಡರ್ ಕರಗಿಸಿ ಹಾಕಿ. ಪುನಃ ಹಾಲನ್ನು ಕುದಿ ಬರುವವರೆಗೆ ಚೆನ್ನಾಗಿ ಕಾಯಿಸಿ. ನಂತರ ಹಾಲನ್ನು ಆರಲು ಬಿಡಿ.
ಹಾಲು ಆರಿದ ಬಳಿಕ ಅದಕ್ಕೆ ವೆನಿಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಒಂದು ಪಾತ್ರೆಗೆ ವಿಪ್ಪಿಂಗ್ ಕ್ರೀಂ ಹಾಕಿ, ಹ್ಯಾಂಡ್ ಮಿಕ್ಸರ್ ನಿಂದ ಹತ್ತು ನಿಮಿಷ ಬ್ಲೆಂಡ್ ಮಾಡಿ. ಇದಕ್ಕೆ ಮಿಲ್ಕ್ ಮೇಡ್, ಆರಿದ ಹಾಲನ್ನು ಸೇರಿಸಿ. 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಮೆಟಲ್ ಕಂಟೈನರ್ ಗೆ ಹಾಕಿ ಸೆಟ್ ಆಗಲು ಬಿಡಿ. ಬಳಿಕ ಡೀಪ್ ಫ್ರೀಜರ್ ನಲ್ಲಿಡಿ.
ಎರಡು ಗಂಟೆಯ ಬಳಿಕ ಮತ್ತೆ ಹ್ಯಾಂಡ್ ಮಿಕ್ಸರ್ ನಿಂದ ಚೆನ್ನಾಗಿ ಬ್ಲೆಂಡ್ ಮಾಡಿ, ಫ್ರೀಜ್ ನಲ್ಲಿಟ್ಟು, ನಾಲ್ಕು ಗಂಟೆಗಳ ತನಕ ಸೆಟ್ ಆಗಲು ಬಿಡಿ. ಈಗ ಪುನಃ ತೆಗೆದು ಹ್ಯಾಂಡ್ ಮಿಕ್ಸರ್ ನಿಂದ ಒಂದು ನಿಮಿಷ ಚೆನ್ನಾಗಿ ಕಲಸಿ ನಂತರ ಗಾಳಿಯಾಡದ( air tight) ಕಂಟೈನರ್ ಅಥವಾ ಐಸ್ ಕ್ರೀಂ ಬಾಕ್ಸ್ ಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ 10 ರಿಂದ 12 ಗಂಟೆ ಫ್ರೀಜರ್ ನಲ್ಲಿಟ್ಟು ಸವಿಯಿರಿ.
cooking recipies – saakshatv









