ADVERTISEMENT
Wednesday, May 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Lata Mangeshkar : ಮೌನವಾಯ್ತು ಗಾನ ಕೋಗಿಲೆ..

Mahesh M Dhandu by Mahesh M Dhandu
February 6, 2022
in National, Newsbeat, ದೇಶ - ವಿದೇಶ
lata-mangeshkar-nightingale of india saaksha tv
Share on FacebookShare on TwitterShare on WhatsappShare on Telegram

Lata Mangeshkar : ಮೌನವಾಯ್ತು ಗಾನ ಕೋಗಿಲೆ..

ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ಭಾರತದ ಗಾನ ಕೋಗಿಲೆ ಇಂದು ಹಾಡು ಇಲ್ಲಿಸಿದೆ. ಭಾರತೀಯ ಸಂಗೀತ ಜಗತ್ತಿಗೆ ಇಂದು ಕರಾಳ ದಿನ. lata-mangeshkar-nightingale of india saaksha tv

Related posts

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

May 27, 2026
ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತ ರಾಜ್ಯ ಸರ್ಕಾರ: ಕರ್ನಾಟಕದ ಜನತೆ ಅನಾಥ ಎಂದ ಬಿಜೆಪಿ

ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತ ರಾಜ್ಯ ಸರ್ಕಾರ: ಕರ್ನಾಟಕದ ಜನತೆ ಅನಾಥ ಎಂದ ಬಿಜೆಪಿ

May 27, 2026

ಹೌದು..!  ಭಾರತ ರತ್ನ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರು ಇಂದು ನಮ್ಮ ನಿಮ್ಮೆಲ್ಲರನ್ನ ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಜನವರಿ 9ರಂದು ಕೋವಿಡ್ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಸೋಂಕು ಮತ್ತು ನ್ಯುಮೋನಿಯಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಕಾರಣ ಹಾಗೂ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ನ್ನು ತೆಗೆಯಲಾಗಿತ್ತು.

lata-mangeshkar-nightingale of india  saaksha tv

ಆದರೆ ನಿನ್ನೆಯಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದ್ದು, ಪುನಃ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ  ಇಂದು ಬೆಳಿಗ್ಗೆ 8 ಗಂಟೆ 12 ನಿಮಿಷಗಳಿಗೆ ಲತಾ ಮಂಗೇಶ್ಕರ್ ಅವರು ಕೊನೆಯುಸಿರೆಳೆದಿದ್ದು, ಭಾರತೀಯ ಚಿತ್ರರಂಗ ಸೇರಿದಂತೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.

ಅವರು 1942 ರಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತದ ನೈಟಿಂಗೇಲ್ ಎಂದು ಕರೆಯಲ್ಪಡುವ ಅವರು ಸುಮಾರು 20 ಭಾಷೆಗಳಲ್ಲಿ 50,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಅವರ ಹಾಡುಗಳು ಇಂದಿಗೂ ಹಿಂದಿ ಚಿತ್ರರಂಗದಲ್ಲಿ ಕೇಳುಗರನ್ನು ರಂಜಿಸುತ್ತಲೇ ಇವೆ. ಅವರ ಗೈರುಹಾಜರಿಯ ಸುದ್ದಿಯಿಂದ ಸಿನಿ ಸಂಗೀತಾಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

1942 ರಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಲತಾ ಮಂಗೇಶ್ಕರ್, ನೌಷಾದ್ ಅವರಿಂದ ಹಿಡಿದು ಎಆರ್ ರೆಹಮಾನ್ ವರೆಗೂ ಎಲ್ಲರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನೈಟಿಂಗೆಲ್ ಆಫ್ ಇಂಡಿಯಾ ಎಂದು ಕರೆಸಿಕೊಳ್ಳುತ್ತಿದ್ದ ಲತಾ ಮಂಗೇಶ್ಕರ್ ಅವರು ಸುಮಾರು 20 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನಾಡಿದ್ದಾರೆ.  ಲತಾ ಅವರ ಹಾಡುಗಳು ಅಂದಿಗೂ ಇಂದಿಗೂ ಹಿಂದಿ ಚಿತ್ರರಂಗದಲ್ಲಿ ಕೇಳುಗರನ್ನು ರಂಜಿಸುತ್ತಲೇ ಇವೆ.  

lata-mangeshkar-nightingale of india  saaksha tv

ಗಾನವೇ ಪರಮಾವಧಿ..

ಲತಾ ಅವರು ಸೆಪ್ಟೆಂಬರ್ 28, 1929 ರಂದು ಪ್ರಸಿದ್ಧ ಸಂಗೀತಗಾರ ದೀನಾನಾಥ್ ಮಂಗೇಶ್ಕರ್ ಅವರ ಹಿರಿಯ ಮಗಳಾಗಿ ಜನಿಸಿದರು. ಐದನೇ ವಯಸ್ಸಿನಲ್ಲಿ ತಂದೆಯೊಂದಿಗೆ ಸಂಗೀತ ತರಬೇತಿಯನ್ನು ಪ್ರಾರಂಭಿಸಿದ ಲತಾ ಅವರು, ಸಂಗೀತವೇ ತಮ್ಮ ಜಗತ್ತಿನಂತೆ ಜೀವಿಸಿದ್ದರು.  ಚಿಕ್ಕವಯಸ್ಸಿನಲ್ಲಿಯೇ ತಂದೆ ತೀರಿಕೊಂಡಿದ್ದರಿಂದ ಹದಿಮೂರನೇ ವಯಸ್ಸಿನಲ್ಲಿ ಸಂಸಾರವನ್ನು ಪೋಷಿಸುವ ಜವಾಬ್ದಾರಿ ಲತಾ ಅವರ ಮೇಲೆ ಬಿತ್ತು. ಇದರಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಲತಾ ಮಂಗೇಶ್ಕರ್, 1942 ರಲ್ಲಿ ಮರಾಠಿ ಚಿತ್ರ ಪಹ್ಲಾ ಮಂಗಳ ಗೌರ್‌ ನಲ್ಲಿ ಹೀರೋ ತಂಗಿಯಾಗಿ ನಟಿಸಿ, ಎರಡು ಹಾಡುಗಳನ್ನು ಹಾಡಿದರು. ಆ ನಂತರ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ.

lata-mangeshkar-nightingale of india  saaksha tv

ಗಿನ್ನಿಸ್ ಬುಕ್

ಮಂಗೇಶ್ಕರ್ ಅವರು 1947 ರಲ್ಲಿ ಮಜ್ಬೂರ್ ಚಿತ್ರದ ಮೂಲಕ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಹಲ್ ಜೊತೆ ಸ್ಟಾರ್ ಪಟ್ಟ ಗಳಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿಯೇ ತಮ್ಮ ಪ್ರತಿಭೆಯಿಂದ ಅತ್ಯುತ್ತನ ಶಿಖರಗಳನ್ನು ಏರಿದರು. ಅನೇಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ ಲತಾ ಮಂಗೇಶ್ಕರ್, ಜನರ ಹೃದಯದಲ್ಲಿ  ಲೆಜಂಡರಿ ಸಿಂಗರ್ ಆಗಿ ಅಳಿಸಲಾಗದ ಗುರುತು ಹಾಕಿದ್ದಾರೆ. ಲತಾ ಅವರು 1955 ರ ಮರಾಠಾ ಚಲನಚಿತ್ರ ರಾಮ್ ರಾಮ್ ಪವ್ಹಾನೆಗೆ ಸಂಗೀತ ನಿರ್ದೇಶನ ಮಾಡಿದ್ದರು. ಸಧಿ ಮನಸೇ ಚಿತ್ರಕ್ಕಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಈ ಚಿತ್ರದ ಐರೋನಿಂಚಿಯಾ ದೇವ ತುಲಾ ಹಾಡಿಗೆ ಲತಾ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. 1948-1978ರ ಅವಧಿಯಲ್ಲಿ 30,000 ಹಾಡುಗಳನ್ನು ಹಾಡಿದ ಏಕೈಕ ಗಾಯಕಿಯಾಗಿ ಲತಾ ಮಂಗೇಶ್ಕರ್ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

lata-mangeshkar-nightingale of india  saaksha tv

ಭಾರತದ ನೈಟಿಂಗೇಲ್ ಎಂಬ ಹೆಸರನ್ನ ದಕ್ಕಿಸಿಕೊಂಡ ಲತಾಜೀ ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನದಿಂದ ಗೌರವಿಸಲ್ಪಟ್ಟಿದ್ದಾರೆ. ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಇತರ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಎಂಎಸ್ ಸುಬ್ಬುಲಕ್ಷ್ಮಿ ನಂತರ ಭಾರತ ಸರ್ಕಾರದಿಂದ ಅನೇಕ ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದ ಅಪರೂಪದ ಗಾಯಕರಲ್ಲಿ ಲತಾಜೀ ಒಬ್ಬರು.

Tags: #Saaksha TVLata Mangeshkarnightingale of india
ShareTweetSendShare
Join us on:

Related Posts

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

by Shwetha
May 27, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಚರ್ಚೆಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಬೆನ್ನಲ್ಲೇ, ಸಚಿವ ಕೆಎನ್ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ...

ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತ ರಾಜ್ಯ ಸರ್ಕಾರ: ಕರ್ನಾಟಕದ ಜನತೆ ಅನಾಥ ಎಂದ ಬಿಜೆಪಿ

ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತ ರಾಜ್ಯ ಸರ್ಕಾರ: ಕರ್ನಾಟಕದ ಜನತೆ ಅನಾಥ ಎಂದ ಬಿಜೆಪಿ

by Shwetha
May 27, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಭೇಟಿ ಮತ್ತು ಕುರ್ಚಿ ಕಾಳಗದ ವಿಚಾರವೀಗ ಹದ್ದು ಮೀರಿದ ವಾಕ್ಸಮರಕ್ಕೆ ಕಾರಣವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ದೆಹಲಿ ಹೈಕಮಾಂಡ್ ಮುಂದೆ...

ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಕರ್ನಾಟಕ ರಾಜಕೀಯದಲ್ಲಿ ಹೈವೋಲ್ಟೇಜ್ ಡ್ರಾಮಾ ಸಿದ್ದರಾಮಯ್ಯಗೆ ಪ್ರಿಯಾಂಕಾ ಗಾಂಧಿ ಶಾಕ್ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

by Shwetha
May 27, 2026
0

ದೆಹಲಿಯ ಅಂಗಳದಲ್ಲಿ ಕರ್ನಾಟಕ ರಾಜಕೀಯದ ಭವಿಷ್ಯ ನಿರ್ಧಾರವಾಗುವ ಸಮಯ ಹತ್ತಿರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ನಾಯಕತ್ವದ ಸಂಘರ್ಷ ಈಗ ಅಂತಿಮ...

ರಾಜ್ಯ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್..! ದೆಹಲಿಯಲ್ಲಿ CM ಕುರ್ಚಿಗಾಗಿ ಫೈನಲ್ ಫೈಟ್

ರಾಜ್ಯ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್..! ದೆಹಲಿಯಲ್ಲಿ CM ಕುರ್ಚಿಗಾಗಿ ಫೈನಲ್ ಫೈಟ್

by Shwetha
May 27, 2026
0

ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಸೃಷ್ಟಿಯಾಗಿದ್ದು, ರಾಜ್ಯದ ಅಧಿಕಾರ ರಾಜಕಾರಣಕ್ಕೆ ಇದೀಗ ದೆಹಲಿ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ...

ಹೈಕಮಾಂಡ್ ಅಂಗಳದಲ್ಲಿ ಡಿಕೆಶಿ ಮೌನಂ ಶಕ್ತಿ ಲಕ್ಷಣ : ಸಿಎಂ ಕುರ್ಚಿ ಚರ್ಚೆ ನಡುವೆ ಮಂದಹಾಸದ ಮರ್ಮವೇನು

ಹೈಕಮಾಂಡ್ ಅಂಗಳದಲ್ಲಿ ಡಿಕೆಶಿ ಮೌನಂ ಶಕ್ತಿ ಲಕ್ಷಣ : ಸಿಎಂ ಕುರ್ಚಿ ಚರ್ಚೆ ನಡುವೆ ಮಂದಹಾಸದ ಮರ್ಮವೇನು

by Shwetha
May 27, 2026
0

ನವದೆಹಲಿ : ಕರ್ನಾಟಕ ರಾಜಕಾರಣದ ದಿಕ್ಸೂಚಿ ಈಗ ದೆಹಲಿಯತ್ತ ತಿರುಗಿದೆ. ರಾಜ್ಯದ ಮುಖ್ಯಮಂತ್ರಿ ಗಾದಿಯ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram