BJP | ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ
ಬೆಂಗಳೂರು : ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಡಿಕೆಶಿಯವರೇ, ರಾಷ್ಟ್ರ ಧ್ವಜ ಇಳಿಸಿದ್ದಕ್ಕೆ ನಿಮ್ಮ ಬಳಿ ಪೂರಕ ಸಾಕ್ಷಿ ಇದೆಯೇ? ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಕ್ಕೆ ದೇಶದ ಮುಂದೆ ಕ್ಷಮೆಯಾಚಿಸಿ ಎಂದು ಆಗ್ರಹಿಸಿದೆ.
ಸಾಕ್ಷ್ಯ ಒದಗಿಸುವಿರಾ ಡಿ.ಕೆ.ಶಿವಕುಮಾರ್ ತಿರಂಗ ಧ್ವಜವನ್ನು ಅಪಮಾನಿಸಿದ ನೀವು ಈ ಬಗ್ಗೆ ಒಂದೋ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಸಾಕ್ಷ್ಯ ಒದಗಿಸಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸಿದ ನೀವು ರಾಜಕೀಯದಲ್ಲಿರಲು ಅನರ್ಹ.
ಮಾಧ್ಯಮಗಳ ಎದುರು ಬಂದು “ರಾಷ್ಟ್ರ ಧ್ವಜವನ್ನು ಇಳಿಸಿ ಬಿಟ್ಟರಲ್ಲರೀ…” ಎಂದು ಡಿಕೆಶಿವಕುಮಾರ್ ಅವರು ಸದಾರಮೆ ನಾಟಕವಾಡಿದಾಗಲೇ ರಾಜ್ಯದ ಜನತೆಗೆ ಅರ್ಥವಾಗಿತ್ತು. ಸುಳ್ಳೇ ಕಾಂಗ್ರೆಸ್ಸಿಗರ ಮನೆ ದೇವರು ಎಂಬ ಸತ್ಯ ದೇಶದ ಜನತೆಗೆ ಎಂದೋ ಅರಿವಾಗಿದೆ.
ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ. ಡಿಕೆಶಿಯವರೇ, ಹಿಜಾಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ ಎಂದು ಬಿಜೆಪಿ ಪ್ರಶ್ನಿಸಿದೆ.









