Grandma combat training : AK 47 ಗನ್ ಹಿಡಿದ 79ರ ಅಜ್ಜಿ
ಉಕ್ರೇನ್ ಗಡಿಯಲ್ಲಿ ರಷ್ಯಾ ದೊಡ್ಡ ಪ್ರಮಾಣದ ಸೈನ್ಯವನ್ನು ನಿಯೋಜಿಸಿ ಯುದ್ಧದ ಭಯವನ್ನು ಹೆಚ್ಚಿಸಿದೆ. ಒಂದೆಡೆ ಅಮೆರಿಕ ರಷ್ಯಾಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದೆ.
ಇದರೊಂದಿಗೆ, ಉಕ್ರೇನ್ ತಮ್ಮ ದೇಶದಲ್ಲಿನ ವಯಸ್ಕರಿಂದ ಹಿಡಿದು ಮಕ್ಕಳವರೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಲ್ಲದೇ ದೇಶವನ್ನು ರಕ್ಷಿಸುವಂತೆ ತರಬೇತಿ ನೀಡಲು ತಯಾರಿ ನಡೆಸುತ್ತಿದೆ.
ಇದಕ್ಕೆ ಮಕ್ಕಳು, ದೊಡ್ಡವರು ಯಾವುದೇ ಭಯವಿಲ್ಲದೆ ಸೈನಿಕ ತರಬೇತಿಗೆ ಮುಂದೆ ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವ್ಯಾಲೆಂಟಿನಾ ಕಾನ್ಸ್ಟಾಂಟಿನೋವ್ಸ್ಕಾ ಅನ್ನೋ 79 ವರ್ಷದ ಉಕ್ರೇನ್ ಅಜ್ಜಿ, ಎಕೆ-47 ರೈಫಲ್ ಹಿಡಿದು ಸೇನಾ ತರಬೇತಿ ಪಡೆಯುತ್ತಿದ್ದಾರೆ.
grandma-combat-training-ukrainian-grandmother-holding-ak-47
ಅಲ್ಲಿನ ಸ್ಥಳೀಯ ಮಾಧ್ಯಮದವರು ಈಬಗ್ಗೆ ಅಜ್ಜಿಯನ್ನು ಪ್ರಶ್ನಿಸಿದಾಗ, “ ನಾನು ಮಾತ್ರವಲ್ಲ, ನಿಮ್ಮ ತಾಯಿ ಕೂಡ ಖಂಡಿತವಾಗಿ ರಫೆಲ್ ಕಲಿಯಲು ಸಿದ್ಧರಾಗಿದ್ದಾರೆ, ಏಕೆಂದರೆ ಅವರು ತಮ್ಮ ಮಕ್ಕಳು ಮತ್ತು ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಸಮಯ ಬಂದಿದೆ” ಎಂದು ಅಜ್ಜಿ ಹೇಳಿದ್ದಾರೆ.
ಗಡಿಯಲ್ಲಿ ರಷ್ಯಾದ ಪಡೆಗಳ ಆರ್ಭಟ ಮುಂದುವರೆಯುತ್ತಿರುವ ಕಾರಣ, ಉಕ್ರೇನ್ ತನ್ನ ಜನರಿಗೆ ಮೂಲಭೂತ ಮಿಲಿಟರಿ ತಂತ್ರಗಳನ್ನು ಕಲಿಸುತ್ತಿದೆ.
ರಾಗ್-ಟ್ಯಾಗ್ ಸೈನ್ಯವನ್ನು ನಿರ್ಮಿಸಲು ದೇಶಾದ್ಯಂತ ನಡೆಸಿದ ಹಲವಾರು ಕಸರತ್ತುಗಳಲ್ಲಿ ಇದು ಒಂದಾಗಿದೆ. ಅದರ ಭಾಗವಾಗಿ ಈ ಅಜ್ಜಿ ಆರ್ಮಿ ಬೆಟಾಲಿಯನ್ ಸೇರಿ ಮಿಲಿಟರಿ ಕಸರತ್ತು ಕಲಿಯುತ್ತಾರೆ.
ಪ್ರಸ್ತುತ ಈ ಫೋಟೋಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಆಕೆಯನ್ನು ಹೀರೋ ಎಂದು ಕೊಂಡಾಡಿದ್ದು, ನಾನಾ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.









