Chitradurga | ಹಿಜಾಬ್ ತೆಗೆದು ಕ್ಲಾಸ್ ಗೆ ಹೋಗಿ.. ಇಲ್ಲಾ ಮನೆಗೆ ಹೋಗಿ
ಚಿತ್ರದುರ್ಗ: ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು, ಅವರನ್ನ ಪೊಲೀಸರು ತಡೆದಿದ್ದಾರೆ.
ಹಿಜಾಬ್ ವಿವಾದ ಕುರಿತಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಹೀಗಿದ್ದರೂ ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥೀಯರು ಹಿಜಾಬ್ ಧರಿಸಿ ತರಗತಿಗಳಿಗೆ ಬಂದಿದ್ದಾರೆ.
ಅಲ್ಲದೇ ಹಿಜಾಬ್ ಧರಿಸಿಯೇ ತರಗತಿಗೆ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಸ್ಥಳದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಿಜಾಬ್ ತೆಗೆದು ತರಗತಿಗೆ ತೆರಳಿ, ಇಲ್ಲ ಮನೆಗೆ ಹೋಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರಿಂದಾಗಿ ಪೊಲೀಸರ ಜತೆ ವಿದ್ಯಾರ್ಥಿಗಳು ವಾಗ್ವಾದಕ್ಕಿಳಿದ್ದಾರೆ.
ಕಾಲೇಜಿಗೆ ರಜೆ ಘೋಷಿಸಿ ಇಲ್ಲ ನಮಗೆ ತರಗತಿಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿನಿಯರು ವಾದ ಮಾಡುತ್ತಿದ್ದಾರೆ.







