IPL | ಗುಜರಾತ್ ಟೈಟಾನ್ಸ್ ಲೋಗೋ ಹೇಗಿದೆ ಗೊತ್ತಾ..?
ಅಹಮದಾಬಾದ್ : ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತಂಡವು ತನ್ನ ಲೋಗೋವನ್ನು ಬಿಡುಗಡೆ ಮಾಡಿದೆ.
ಹಾರುವ ಗಾಳಿಪಟದ ಆಕಾರದಲ್ಲಿ ಗುಜರಾತ್ ಟೈಟಾನ್ಸ್ ಲೋಗೋ ಇದೆ.
ಗಾಳಿಪಟಗಳು ಗುಜರಾತಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದು, ಉತ್ತರಾಯಣ ಪುಣ್ಯಕಾಲದಲ್ಲಿ ಗಾಳಿಪಟ ಹಾರಿಸುವುದು ವಾಡಿಕೆ.
ಹೀಗಾಗಿ ಗುಜರಾತ್ ಆಶಯಗಳ ಸಂಕೇತವಾಗಿ ತನ್ನ ಲೋಗೋವನ್ನ ಡಿಸೈನ್ ಮಾಡಿದೆ.
ಇದು ಅಂತ್ಯವಿಲ್ಲದ ತಮ್ಮ ತಂಡದ ಗುರಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ಫ್ರಾಂಚೈಸಿ ತಿಳಿಸಿದೆ.









