Bangalore | ಗೋವಿಂದರಾಜನಗರದಲ್ಲಿ ನೂತನ ದೇಗುಲಗಳ ಉದ್ಘಾಟನೆ
ಬೆಂಗಳೂರು- ಬೆಂಗಳೂರು- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಕೈಲಾಸೇಶ್ವರ, ಶ್ರೀ ಈಶ್ವರ ದೇವಾಲಯಗಳನ್ನು ಸೋಮವಾರ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ನಿರ್ಮಲನಂದನಾಥ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು ಈ ಭಾಗದ ಜನರಿಗೆ ದೇವಸ್ಥಾನದ ಅವಶ್ಯಕತೆ ಇತ್ತು. ಈವತ್ತು ಒಟ್ಟು ಭವ್ಯವಾದ ದೇವಾಲಯಗಳು ಭಕ್ತರಿಗೆ ಲಭ್ಯವಾಗಲಿವೆ. ಇಬ್ಬರೂ ಶ್ರೀಗಳು ನನ್ನ ಆರಾಧ್ಯ ದೈವಗಳು. ಅವರ ಆಶೀರ್ವಾದದಿಂದಲೇ ಈ ಕಾರ್ಯ ಸಾಧ್ಯವಾಗಿ, ಕ್ಷೇತ್ರದಲ್ಲಿ 53 ದೇಗುಲಗಳು ನಿರ್ಮಾಣವಾಗಿವೆ ಎಂದರು.
ಸಿದ್ದಗಂಗಾ ಶ್ರೀಗಳು ಮಾತನಾಡಿ, ಅಭಿವೃದ್ಧಿ ಹರಿಕಾರರು ಸೋಮಣ್ಣ ಅವರು. ಈ ಭಾಗದಲ್ಲಿ ಬಹುದಿನಗಳಿಂದ ಈ ಅಭಿವೃದ್ಧಿಯ ಬಗ್ಗೆ ಸಂಕಲ್ಪ ತೊಟ್ಟು ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದಾರೆ.
ದೇವಾಲಯಗಳು ನೆಮ್ಮದಿಯ ತಾಣ. ಸಮುದಾಯದ ಸಾಮರಸ್ಯಕ್ಕೆ ದೇವಸ್ಥಾನಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ.
ಕುಗ್ರಾಮದಲ್ಲಿ ಹುಟ್ಟಿ ಮಹಾನಗರದಲ್ಲಿ ಅತ್ಯುನ್ನತ ಸ್ಥಾನವನ್ನು ವಿ.ಸೋಮಣ್ಣ ಪಡೆದಿದ್ದಾರೆ. ವಿ.ಸೋಮಣ್ಣ ಅವರು ಸೆಲ್ಫ್ ಮೇಡ್ ಸಾಧಕರು. ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನದಲ್ಲಿ ನೆಲೆಯೂರಿದ್ದಾರೆ. ಸದಾ ಕ್ರೊಯಾಶೀಲವಾಗಿ ಕಾರ್ಯನಿರ್ವಹಿಸುವ ಅವರಿಂದ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹೇಳಿದರು.
ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ ವಿ.ಸೋಮಣ್ಣ ಅವರಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ನಡೆಯುತ್ತಿದೆ. ಮನುಷ್ಯ ಆಧ್ಯತ್ಮದ ಮೂಲಕ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಈ ಕಾರಣಕ್ಕೆ ದೇವಸ್ಥಾನಗಳು ಬಹುದೊಡ್ಡ ಪಾತ್ರ ವಹಿಸುತ್ತವೆ.
ನಮ್ಮೊಳಗಿನ ಜಾಗೃತವಾಗಬೇಕು. ದಿನದ ಬಹುಭಾಗ ಜನಸೇವೆಯಲ್ಲಿಯೇ ವಿ.ಸೋಮಣ್ಣ ಅವರು ನಿರತರಾಗಿದ್ದಾರೆ. ಇಂಥ ನಾಯಕರ ಅವಶ್ಯಕತೆ ಸಮಾಜಕ್ಕಿದೆ ಎಂದರು. bangalore-Opening of New Temples in Govindarajan Nagar saaksha tv








