Kohli | ಈ ಫೋಟೋದಲ್ಲಿ ವಿರಾಟ್ ಎಲ್ಲಿದ್ದಾರೆ..?
ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಫೋಟೋವೊಂದು ಸದ್ಯ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಠಿ ಮಾಡಿದೆ..
ಸ್ವತಃ ಕೊಹ್ಲಿಯೇ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಫೋಟೋಗೆ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ.
ಇಷ್ಟಕ್ಕೂ ಈ ಫೋಟೋದ ವಿಶೇಷತೆ ಏನು ಅಂತ ನಿಮಗನಿಸುತ್ತಿದ್ದರೇ..? ಒಮ್ಮೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ.. ನಿಮಗೆ ಅರ್ಥವಾಗುತ್ತದೆ.
ಈ ಫೋಟೋದಲ್ಲಿ ಕಾಣಿಸುವ 10 ಜನರು ವಿರಾಟ್ ಕೊಹ್ಲಿಯಂತೆ ಇದ್ದಾರೆ.
ಇವರಲ್ಲಿ ನಾನೇಲ್ಲಿದ್ದೀನಿ ಅಂತಾ ಹೇಳಿ ಎಂದು ವಿರಾಟ್ ಕೊಹ್ಲಿ ಸವಾಲಾಕಿದ್ದಾರೆ.
ಈ ಫೋಟೋ ನೋಡಿದ ಹಲವರಿಗೆ ನಿಜವಾಗಿ ಕೊಹ್ಲಿ ಫೋಟೋದಲ್ಲಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಈ ಫೋಟೋ ನೆಟ್ಟಿಗರಲ್ಲಿ ಗೊಂದಲ ಮೂಡಿಸಿದೆ.
Find the odd one out. pic.twitter.com/cJCpNGmQfP
— Virat Kohli (@imVkohli) February 20, 2022









