ಚಂದ್ರ ಗ್ರಹದ ಮೇಲೆ K.L.Rahul..!!
ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಿಂದ ದೂರ ಉಳಿದಿದ್ದಾರೆ.
ಸದ್ಯ ರಾಹುಲ್ ಬೆಂಗಳೂರಿನ ಎನ್ ಸಿಎ ಅಕಾಡೆಮಿಯಲ್ಲಿದ್ದು, ಫಿಟ್ ನೆಸ್ ಕಡೆ ಗಮನ ಹರಿಸಿದ್ದಾರೆ.
ಇನ್ನೂ ಕೆ.ಎಲ್.ರಾಹುಲ್ ನಮಗೆ ಐಪಿಎಲ್ ನಲ್ಲಿಯೇ ಕಾಣಿಸಲಿದ್ದಾರೆ. ಪಂಜಾಬ್ ಕಿಂಗ್ಸ್ ನಿಂದ ಬಿಡುಗಡೆಗೊಂಡಿರುವ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದಾರೆ.
ಇದು ಹೀಗಿದ್ದರೇ ಸದ್ಯ ಕೆ.ಎಲ್.ರಾಹುಲ್ ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಾಹುಲ್ ಫೋಟೋಗಿಂತ ಬ್ಯಾಕ್ ಗ್ರೌಂಡ್ ಹೆಚ್ಚು ಹೈಲೈಟ್ ಆಗಿದೆ. ಇದಕ್ಕೆ ಚಂದ್ರನ ಮೇಲಿದ್ದೇನೆ ಎಂಬ ಶೀರ್ಷಿಕೆಯನ್ನೂ ರಾಹುಲ್ ಸೇರಿಸಿದ್ದಾರೆ.
ಇದರೊಂದಿಗೆ ಕೆಲವರು ರಾಹುಲ್ ಅವರನ್ನು ಚುಡಾಯಿಸಿ ಲೇವಡಿ ಮಾಡುತ್ತಿದ್ದಾರೆ. ಇದನ್ನು ನೋಡಿದ ಕೆಎಲ್ ರಾಹುಲ್ ಸ್ನೇಹಿತ ದಿನೇಶ್ ಕಾರ್ತಿಕ್, ‘ಬಾಬಿ, ನೀನೇನಾದ್ರೂ ಆ್ಯಪಲ್ ಮ್ಯಾಪ್ ಬಳಸುತ್ತಿದ್ದೀಯಾ’ ಎಂದು ಕಾಮೆಂಟ್ ಮಾಡಿದ್ದಾರೆ.









