Uttar Pradesh | ಕೇವಲ 16 ಗಂಟೆಯೊಳಗೆ 107 ಕಣ್ಣುಗಳ ಆಪರೇಷನ್
ಪ್ರಯಾಗರಾಜ್ : ಪ್ರಾದೇಶಿಕ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್ ರಾಜ್ ನಲ್ಲಿರುವ ಎಂಎಲ್ ಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಪಿ ಸಿಂಗ್ ಹೊಸ ದಾಖಲೆಯನ್ನು ಬರೆದಿದ್ದಾರೆ.
ಕೇವಲ 16 ಗಂಟೆಯೊಳಗೆ 107 ಕಣ್ಣುಗಳ ಆಪರೇಷನ್ ಮಾಡಿದ್ದಾರೆ. ಅವರಯ 16 ಗಂಟೆಯ ಅವಧಿಯಲ್ಲಿ ಇಂಟ್ರಾಕ್ಯುಲರ್ ಲೆನ್ಸ್ ಇಂಪ್ಲಾಂಟ್‌ನೊಂದಿಗೆ 107 ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಎಸ್.ಪಿ.ಸಿಂಗ್ ಅವರು, ಫೆಬ್ರವರಿ 25ರಂದು ಬೆಳಿಗ್ಗೆ 6ರಿಂದ ರಾತ್ರಿ 10.30ರವರೆಗೆ ನಿರಂತರವಾಗಿ 16 ಗಂಟೆ 30 ನಿಮಿಷಗಳ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ.
ಇನ್ನು ಈ ಬಗ್ಗೆ ಸಂಸತ ವ್ಯಕ್ತಪಡಿಸಿರುವ ಎಸ್.ಪಿ.ಸಿಂಗ್, ಒಂದೇ ಬಾರಿಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು, ನನಗೆ ಸಂತೋಷವಾಗಿದೆ. ಇದು ಕಿರಿಯ ಸರ್ಜನ್ಗಳಿಗೆ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ. uttar-pradesh-107-eye-operations-in-16-hours