ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶ್ರೀ ದ್ರೌಪದಿ ಪತಿವ್ರತೆಯೇ ?

Mahesh M Dhandu by Mahesh M Dhandu
March 6, 2022
in Newsbeat, Saaksha Special, ಎಸ್ ಸ್ಪೆಷಲ್
Pativrate Draupadi Mahabharatha saaksha tv
Share on FacebookShare on TwitterShare on WhatsappShare on Telegram

ಶ್ರೀ ದ್ರೌಪದಿ ಪತಿವ್ರತೆಯೇ ?

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋಧರಿ ತಥಾ।

Related posts

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

July 8, 2026
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಕೃಷಿ ಸಾಲ ಮನ್ನಾ ಕುರಿತು ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

July 8, 2026

ಪಂಚ ಕನ್ಯಾಸ್ಮರೇ ನಿತ್ಯಂಮಹಾ ಪಾತಕ ನಾಶನಮ್॥

 ಅಹಲ್ಯಾ,  ದ್ರೌಪದಿ,  ಸೀತಾ,  ತಾರಾ,  ಮಂಡೋಧರಿ

ಈ ಐದು ಮಹಾಪತಿವ್ರತೆಯರನ್ನು ಯಾರು ನಿತ್ಯವೂ ಸ್ಮರಿಸುತ್ತಾರೊ ಅವರ ಮಹಾಪಾತಕಗಳು ದೂರವಾಗುತ್ತವೆ ಎಂದು ರಾಮಾಯಣ, ಮಹಾಭಾರತ, ಪುರಾಣದ ಕಥೆಗಳಿಂದ ತಿಳಿದುಬರುತ್ತದೆ. ರಾಮಾಯಣ, ಮಹಾಭಾರತ, ಪುರಾಣಗಳು ಕೇವಲ ಯಾವುದೆ ಒಂದು ಧರ್ಮಕ್ಕೆ ಸಂಬಂಧಿಸಿದ ದೇವದೇವತೆಯರ ಅವತಾರದ ಕಥೆ –ಅಥವಾ ಭಾರತದ ಇತಿಹಾಸವಾಗಿರದೆ ಕಲಿಯುಗದ ಮನುಜರಿಗೆ ಸತ್ಯ, ಧರ್ಮ ಪರಿಪಾಲನೆ ಮಾಡುತ್ತಾ ನೈಜ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಲು ನೀತಿಯನ್ನು ತತ್ವವನ್ನು ಬೋಧಿಸುತ್ತವೆ. ವಿಶೇಷವಾಗಿ ಸ್ತೀಯರು ಈ ಪಂಚಪತಿವ್ರತೆಯರ ಕಥೆಯನ್ನು ಆದರ್ಶವಾಗಿ ಇಟ್ಟುಕೊಂಡು ತಮ್ಮ ಸಂಸಾರವನ್ನು ನಡೆಸಿದರೆ ಆಗ ಅದು ಸುಖಮಯ ಸುಂದರ ಸಂಸಾರವಾಗುತ್ತದೆ. ಆದರೆ ಇಂದಿನ ಕೆಲವು ಸ್ತೀಯರು ಪತಿವ್ರತೆಯರು ಆಚರಿಬೇಕಾದ ಧರ್ಮ ಸಂಸ್ಕೃತಿ ಸಂಸ್ಕಾರ ಆದರ್ಶ ಜೀವನವನ್ನು ಬಿಟ್ಟು ಪಾಶ್ಚಾತ್ಯ ದೇಶದ ಸಂಸ್ಕೃತಿ ಆಚರಿಸುತ್ತಿದ್ದಾರೆ. ನಮ್ಮ ತಾಯ್ನಾಡಿನ ಧರ್ಮದೇವತೆಗಳ ಅವತಾರಗಳ ಸಚ್ಚಾರಿತ್ರವನ್ನು ಕುರಿತು ಪ್ರಶ್ನಿಸುತ್ತಾರೆ. ಇದೇ ನಮ್ಮ ವಿಕೃತಿ. ಪಾಶ್ಚಾತ್ಯರು ತಮ್ಮ ಸಂಸ್ಕೃತಿಯನ್ನು ತೊರೆದು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಾರೆ. ಇದು ಪ್ರಕೃತಿ. ಮೂಢರು ದ್ರೌಪದಿ ಒಬ್ಬಳೇ ಐದು ಜನ ಪಾಂಡವರನ್ನು ಮದುವೆಯಾದದ್ದು ಹೇಗೆ ? ಇದು ಧರ್ಮ ಸಮ್ಮತವೇ ? ಇಂಥವಳು ಪಂಚ ಪತಿವ್ರತೆಯರಲ್ಲಿ ಸೇರಲು ಸಾಧ್ಯಾವೇ ?ಎಂದು ಪ್ರಶ್ನಿಸುತ್ತಾರೆ. ಇದೊಂದು ದುರಂತ ಅಲ್ಲವೇ !

ದ್ರುಪದರಾಜನುಯಾಜ-ಉಪಯಾಜರೆಂಬ ಬ್ರಾಹ್ಮಣ ಶ್ರೇಷ್ಠರನ್ನು ಆಶ್ರಯಿಸಿ ಅವರಿಂದ ಇಷ್ಟಿಯಾಗವನ್ನು ಮಾಡಿಸಿದ. ಆಯಾಗದ ಮಧ್ಯದಿಂದ ದ್ರೌಪದಿ ಎದ್ದು ಬಂದಳು.

ಸ್ತ್ರೀಯರಲ್ಲೆಲ್ಲ ಉತ್ಕೃಷ್ಟವಾದ ಆನಂದ ಉಳ್ಳವಳಾದ್ದರಿಂದಲೂ ದ್ರೌಪದಿ ಕೃಷ್ಣೆ. ವರ್ಣದಿಂದಲೂ ಕೃಷ್ಣೆ ಎನಿಸಿದಳು.

Pativrate Draupadi Mahabharatha saaksha tv

ದ್ರೌಪದಿ ಪಾರ್ವತಿಯ ಅಂಶ ಯುಕ್ತಳಾಗಿದ್ದಳು. ಹಿಂದೆ ಪಾರ್ವತಿಯೂ ಶಚಿ ಮುಂತಾದ ದೇವಿಯರು ಒಮ್ಮೆ ಬ್ರಹ್ಮನು ನೋಡುತ್ತಿದ್ದಂತೆಯೇ ಮೂರು ಬಾರಿ ತಮ್ಮ ಪತಿಗಳೊಡನೆ ಬಹಳ ವಿಲಾಸವನ್ನು ಫ್ರದರ್ಶಿಸಿದರು. ಬ್ರಹ್ಮ ಅವರನ್ನು “ಮನುಷ್ಯ ಜನ್ಮ ಹೊಂದಿರಿ” ಎಂದು ಶಪಿಸಿದ. ನಂತರ ಇವರೆಲ್ಲರೂ ಸೇರಿ ರುದ್ರ ಹಾಗು ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡಿದರು. ಶಾಪ ವಿಮೋಚನೆಯಾಗಿ ನಾಲ್ವರಿಗೆ ನಾಲ್ಕು ಜನ್ಮದ ಬದಲಾಗಿ ಒಂದು ಜನ್ಮದಲ್ಲಿ ಅದೇ ದೇಹದಲ್ಲಿ ನಾಲ್ಕು ಜೀವ ಇದ್ದು ಕಾಲಾಂತರದಲ್ಲಿ ಮೂಲ ರೂಪಕ್ಕೆ ಹೋಗುವಂತೆ ವರ ಪಡೆದರು. ಹೀಗೆ ದ್ರೌಪದಿ ಜನ್ಮವಾಯಿತು.   ಹಾಗೆಯೇ ಮುದ್ಗಲನೆಂಬ ಮುನಿ ಬ್ರಹ್ಮನನ್ನು ಅಪಹಾಸ ಮಾಡಿ ಬ್ರಹ್ಮನಿಂದ “ನೀನು ಅಹಂಕಾರಿ”  ಮನುಷ್ಯ ಜನ್ಮ ಹೊಂದಿ ಭಾರತೀ ಮುಂತಾದ ಐದು ಮಂದಿ ದೇವಿಯರ ಸಂಗ ಮಾಡು ಎಂದು ಶಾಪ ಗ್ರಸ್ತನಾದ. ನಂತರ ತಪಸ್ಸನ್ನು ಮಾಡಿ ಬ್ರಹ್ಮನ ಅನುಗ್ರಹದಿಂದ ಒಂದೇ ಜನ್ಮ ಪಡೆದ. ಹೀಗೆಯೇ ಅತ್ತ ಕುಂತಿದೇವಿಯು ಕೋಪಿಷ್ಟರಾದ ದುರ್ವಾಸರನ್ನು ತನ್ನ ಶಾಂತ ಸ್ವಭಾವದಿಂದ ಸೇವೆಗೈದು ಅವರು ಕೊಟ್ಟವರಗಳಿಂದ ಇಂದ್ರ, ಯಮ, ವಾಯುವನ್ನು ಮತ್ತು ಮಾದ್ರಿ ಅಸ್ವಿನಿದೇವತೆಗಳನ್ನು ಅವಳಿ ಮಕ್ಕಳನ್ನಾಗಿ ಪಡೆದರು. ಅವರೆ ಪಂಚ ಪಾಂಡವರು.

ಸ್ವಯಂ ವರದಲ್ಲಿ ಅರ್ಜುನ ಗೆದ್ದ ದ್ರೌಪದಿಯನ್ನು ಪಂಚ ಪಾಂಡವರು ಮದುವೆಯಾದರು. ಹೀಗೆ ಐದು ಅಂಶಗಳಿಂದ ಕೂಡಿದ ದ್ರೌಪದಿ, ಪಾಂಚಾಲಿಯಾಗಿ ಒಬ್ಬೊಬ್ಬರ ಜೊತೆ ಎರಡು ವರ್ಷಕ್ಕೊಮ್ಮೆ ಎನ್ನುವ ನಿಯಮದಂತೆ ಐದು ಅಂಶಗಳಿಂದ ಅಂದರೆ ಧರ್ಮರಾಜ = ಯಮನೊಂದಿಗೆ – ಶ್ಯಾಮಲೆಯಾಗಿ,

ವಾಯು = ಭೀಮನೊಂದಿಗೆ – ಭಾರತಿಯಾಗಿ, ಅರ್ಜುನ = ಇಂದ್ರ – ಶಚಿಯಾಗಿ, ಅವಳಿದೇವತೆಗಳಾದ ಅಶ್ವಿನಿದೇವತೆಗಳು = ನಕುಲ, ಸಹದೇವಇವರಿಬ್ಬರ

ಜೊತೆ – ಉಷೆಯಾಗಿ ಪಾತಿವ್ರತ್ಯ ಧರ್ಮವನ್ನು ಆಚರಿಸಿದಳು.

Pativrate Draupadi Mahabharatha saaksha tv

ಸ್ತ್ರೀಯರಿಗೆ ಪ್ರಾಣಕ್ಕಿಂತ ಹೆಚ್ಚು ಮಾನ ಮುಖ್ಯ.

ಅಂದು ದ್ರೌಪದಿ ನೂರಾರು ಜನ ತುಂಬಿದ ರಾಜಸಭೆಯಲ್ಲಿ ವೀರಾಧಿ-ವೀರರಾದ ಪಂಚಪಾಂಡವರ ಮುಂದೆಯೇ ವಸ್ತ್ರಾಪಹರಣವಾಗಿ ಮಾನ ಹೋದರು ಪತಿಯಂದಿರನ್ನು ಬಿಡಲಿಲ್ಲ. ಧರ್ಮರಾಜನಿಂದ ಸತ್ಯ-ಸಹನೆಯನ್ನು, ಭೀಮನಿಂದ ಧೈರ್ಯ-ಭಕ್ತಿಯನ್ನು, ಅರ್ಜುನನಿಂದ ಗುರಿ ಸಾಧಿಸುವಿಕೆಯನ್ನು, ನಕುಲ-ಸಹದೇವರಿಂದ ಸಹಬಾಳ್ವೆಯನ್ನು ಕಲಿತು ಮಹಾಪತಿವ್ರತೆಯಾಗಿ ಮೋಕ್ಷವನ್ನು ಪಡೆದಳು.

ಆದರೆ ಇಂದಿನ ಕಾಲದ ಕೆಲವು ಸ್ತೀಯರು ಪತಿ ಅಥವಾ ಪತಿಯ ಮನೆಯವರು ಒಂದು ಮಾತನಾಡಿದರೂ ಸಾಕು ಅಷ್ಟೆ ಗಂಡನಿಗೆ ವಿಛ್ಚೇದನ[ Divorce ]ಪತ್ರ ಕೊಟ್ಟು ತವರುಮನೆ ಸೇರುತ್ತಾರೆ. ಈ ಯುಗದ ಸ್ತೀಯರು ವೇದಕಾಲದ ಸ್ತೀಯರಿಂದ ತಾಳ್ಮೆ-ಸಹನೆ, ಧರ್ಮಪರಿಪಾಲನೆಯನ್ನು ಕಲಿಯಬೇಕಾಗಿದೆ.

“ ಧರ್ಮೋ ರಕ್ಷತಿ ರಕ್ಷಿತಃ ”  ಎನ್ನುವ ವಾಣಿಯಂತೆ ಸತ್ಯಧರ್ಮದಿಂದ ಪತಿವ್ರತೆಯಾಗಿ ಬಾಳಿ ಮುಂದಿನ ಯುವ ಜನಾಂಗಕ್ಕೆ

ಸಂಸ್ಕೃತಿ ಸಂಸ್ಕಾರವನ್ನು ಕೊಟ್ಟರೆ ಆಗ ಮಾತ್ರ ಪ್ರತಿಯೊಬ್ಬ ನಾರಿಯರು ಪತಿವ್ರತೆಯಾಗುತ್ತಾರೆ.

ಆಗ” ಯತ್ರ ನಾರ್ಯಸ್ತು ಪೂಜ್ಯಂತೆ ತತ್ರರಮಂತೆ ದೇವತಾಃ “ಎನ್ನುವ ವಾಣಿಯಂತೆ ನಿಜವಾಗಿ ಸ್ತೀಯರನ್ನು ಪೂಜಿಸಿದಂತಾಗುತ್ತದೆ. ಅಲ್ಲಿ ದೇವತೆಗಳು ಆಶೀರ್ವದಿಸುತ್ತಾರೆ.

ವಿದ್ವಾನ್. ಆನಂದ ಪುರೋಹಿತ

ಶ್ರೀ ಕೃಷ್ಣಾರ್ಪಣ ಮಸ್ತು

Tags: #Saaksha TVDraupadimahabharat
ShareTweetSendShare
Join us on:

Related Posts

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

by Shwetha
July 8, 2026
0

ಬೆಂಗಳೂರು : ಮನೆಯಲ್ಲಿ ನಾಯಿ ಸಾಕುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ನಿಮ್ಮ ಪ್ರೀತಿಯ ಸಾಕುನಾಯಿ ಬೇರೆಯವರ ಮೇಲೆ ದಾಳಿ ಮಾಡಿದರೆ ಅಥವಾ...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಕೃಷಿ ಸಾಲ ಮನ್ನಾ ಕುರಿತು ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

by Shwetha
July 8, 2026
0

ಸಿಎಂ ಡಿ.ಕೆ. ಶಿವಕುಮಾರ್ ಅವರು, ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಉಂಟಾಗಿರುವ ಬರ...

ರಾಮಭಕ್ತರ ಮೇಲೆ ಗುಂಡು ಹಾರಿಸಿದವರಿಗೆ ಅಯೋಧ್ಯೆ ಬಗ್ಗೆ ಮಾತನಾಡುವ ಹಕ್ಕಿಲ್ಲ: ಮಂದಿರದ ಹಣದ ಬಗ್ಗೆ ಕೂಗಾಡುವವರಿಗೆ ಸಾವಿರಾರು ಹೆಕ್ಟೇರ್ ವಕ್ಫ್ ಭೂಮಿ ಹಗರಣ ಕಾಣಲ್ವಾ? ಯೋಗಿ ತಿರುಗೇಟು

ರಾಮಭಕ್ತರ ಮೇಲೆ ಗುಂಡು ಹಾರಿಸಿದವರಿಗೆ ಅಯೋಧ್ಯೆ ಬಗ್ಗೆ ಮಾತನಾಡುವ ಹಕ್ಕಿಲ್ಲ: ಮಂದಿರದ ಹಣದ ಬಗ್ಗೆ ಕೂಗಾಡುವವರಿಗೆ ಸಾವಿರಾರು ಹೆಕ್ಟೇರ್ ವಕ್ಫ್ ಭೂಮಿ ಹಗರಣ ಕಾಣಲ್ವಾ? ಯೋಗಿ ತಿರುಗೇಟು

by Shwetha
July 8, 2026
0

ಪ್ರತಾಪ್‌ಗಢ : ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಧರ್ಮ ಮತ್ತು ಅಯೋಧ್ಯೆಯ ಪವಿತ್ರತೆಯನ್ನು ಹೀಯಾಳಿಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

by Shwetha
July 8, 2026
0

ಡಿ.ಕೆ. ಶಿವಕುಮಾರ್ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೀದರ್‌ನಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಸೌಲಭ್ಯ...

ಮೇಕೆದಾಟು ಪಾದಯಾತ್ರೆ ಕೇವಲ ಚುನಾವಣಾ ನಾಟಕವೇ?: ತಾಕತ್ತಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ; ಹೈಕಮಾಂಡ್ ಗೆ ಹೆದರಿ ಕನ್ನಡಿಗರ ಹಿತ ಬಲಿಗೊಟ್ಟರಾ ಡಿಕೆಶಿ?-ಡಿಕೆಶಿ ಮೌನದ ವಿರುದ್ಧ ಆರ್ ಅಶೋಕ್ ವಾಗ್ದಾಳಿ!

ಖಾನ್, ಅಬ್ದುಲ್ ಹೆಸರುಗಳನ್ನು ಮುಟ್ಟಬೇಡಿ- ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಗೋಲ್ ಮಾಲ್: ಮುಸ್ಲಿಂ ಹೆಸರು ಡಿಲೀಟ್ ಮಾಡದಂತೆ ಡಿಸಿಗಳಿಗೆ ಧಮ್ಕಿ? -ಆರ್ ಅಶೋಕ್ ಗಂಭೀರ ಆರೋಪ

by Shwetha
July 8, 2026
0

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವು ಭಾರಿ ಅಕ್ರಮ ಎಸಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗಂಭೀರವಾಗಿ ಕಿಡಿಕಾರಿದ್ದಾರೆ. ಈ ಕುರಿತು ದೆಹಲಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram