Goa Election | ಕಾಂಗ್ರೆಸ್ ಗೆ ಗೋವಾ ಪ್ರಜ್ಞಾವಂತ ಮತದಾರರಿಂದ ತಕ್ಕ ಪಾಠ
ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಗೋವಾದಲ್ಲಿ ಬಿಜೆಪಿ ಅಧಿಕಾರ ಹಿಡಿಯೋದು ಪಕ್ಕಾ ಆಗಿದೆ.
ಚುನಾವಣಾ ಫಲಿತಾಂಶ ಅತಂತ್ರವಾಗಿದ್ದರೂ ಪಕ್ಷೇತರ ಶಾಸಕ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಗೋವಾ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಗುರಿಯಾಗಿಸಿಕೊಂಡು ರಾಜ್ಯ ಬಿಜೆಪಿ ಘಟಕ ಸರಣಿ ಟ್ವೀಟ್ ಗಳ ಮೂಲಕ ವ್ಯಂಗ್ಯವಾಡಿದೆ.
ಬಿಜೆಪಿ ತಮ್ಮ ಟ್ವೀಟ್ ನಲ್ಲಿ….
ಗೋವಾ ರಾಜ್ಯದ ಫಲಿತಾಂಶ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಅಧಿಕಾರದ ಕನಸು ಕಂಡಿತ್ತು.ಕೂಸು ಹುಟ್ಟುವುದಕ್ಕೆ ಮುನ್ನವೇ ಕುಲಾವಿ ಹೊಲಿಸಲು ಹೋದ ಕಾಂಗ್ರೆಸ್ ಪಕ್ಷಕ್ಕೆ ಗೋವಾದ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ಸಿಗರೇ, ಹಗಲು ಕನಸು ಕಾಣುವುದನ್ನು ನಿಲ್ಲಿಸಿ.
ಸೂರ್ಯ ಮುಳುಗುವುದರೊಳಗೆ ಎಲ್ಲಾ ತಿಳಿಯುತ್ತದೆ. ಪಕ್ಷ ನನಗೆ ಗೋವಾ ರಾಜ್ಯದ ಜವಾಬ್ದಾರಿ ನೀಡಿದೆ ಎಂದು ಎದೆ ಉಬ್ಬಿಸಿ ಹೇಳಿದ್ದ ಡಿ.ಕೆ.ಶಿವಕುಮಾರ್ ಅವರೇ, ಈಗ ಎಲ್ಲಿದ್ದೀರಿ? ಗೋವಾ ಮಾತ್ರವಲ್ಲ, ಇಡೀ ದೇಶದಲ್ಲಿ ಈಗ ಕಾಂಗ್ರೆಸ್ ಪಕ್ಷ ಮುಳುಗಿದ್ದನ್ನು ದೇಶದ ಜನತೆ ನೋಡುತ್ತಿದ್ದಾರೆ.
ಸರ್ಕಾರ ರಚನೆ ಮಾಡಲು ಅತ್ಯುತ್ಸಾಹದಿಂದ ವಿಮಾನದಲ್ಲಿ ಗೋವಾಕ್ಕೆ ಪ್ರಯಾಣ ಬೆಳೆಸಿದ್ದ ಡಿ.ಕೆ.ಶಿವಕುಮಾರ್ ಅವರೇ ಮುಂದೇನು ಮಾಡುತ್ತೀರಿ? ಕಾರವಾರ ಗಡಿಯಿಂದ ಗೋವಾ ರಾಜ್ಯದವರೆಗೆ ಮಹದಾಯಿ ನೀರಿಗೆ ಆಗ್ರಹಿಸಿ ಕಿರುಪಾದಯಾತ್ರೆ ಆಯೋಜಿಸಬಹುದಲ್ಲವೇ ಎಂದು ರಾಜ್ಯ ಬಿಜೆಪಿ ಕುಟುಕಿದೆ.
goa-election-result karnataka bjp slams d k shivakumar









