Mohit-sharma | ಆಗ ಸ್ಟಾರ್ ಬೌಲರ್.. ಈಗ ನೆಟ್ ಬೌಲರ್
ಐಪಿಎಲ್ ನಲ್ಲಿ ಒಂದು ಕಾಲದಲ್ಲಿ ಧೂಳೆಬ್ಬರಿಸಿ ಪರ್ಪಲ್ ಕ್ಯಾಪ್ ದಕ್ಕಿಸಿಕೊಂಡಿದ್ದ ಮೋಹಿತ್ ಶರ್ಮಾ ಈಗ ನೆಟ್ ಬೌಲರ್ ಆಗಿದ್ದಾರೆ.
ಐಪಿಎಲ್‌ನ ಹೊಸ ತಂಡವಾದ ಗುಜರಾತ್ ಟೈಟಾನ್ಸ್‌ಗೆ ನೆಟ್ ಬೌಲರ್ ಆಗಿ ಮೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.
ಮೋಹಿತ್ ಶರ್ಮಾ ಜೊತೆಗೆ ಭಾರತದ ಮತ್ತೋರ್ವ ವೇಗಿ ಬರೀಂದರ್ ಸ್ರಾನ್ ಕೂಡ ಗುಜರಾತ್ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
IPL-2022 ಮೆಗಾ ಹರಾಜಿನಲ್ಲಿ ಮೋಹಿತ್ ಶರ್ಮಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿಲ್ಲ.
ಮೋಹಿತ್ ಶರ್ಮಾ IPL-2021 ಋತುವಿನಲ್ಲಿ ಕೊನೆಯದಾಗಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸಿದ್ದರು. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದರು.
ಅವರು 2014 ರ ಋತುವಿನಲ್ಲಿ 23 ವಿಕೆಟ್ಗಳನ್ನು ಪಡೆದು ಪರ್ಪಲ್ ಕ್ಯಾಪ್ ಅನ್ನು ಪಡೆದುಕೊಂಡಿದ್ದರು.
ಇದುವರೆಗೆ 86 ಐಪಿಎಲ್ ಪಂದ್ಯಗಳನ್ನಾಡಿರುವ ಮೋಹಿತ್ 92 ವಿಕೆಟ್ ಪಡೆದಿದ್ದಾರೆ. ಮೋಹಿತ್ ಶರ್ಮಾ 2014ರ ಟಿ20 ವಿಶ್ವಕಪ್ ಮತ್ತು 2015ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
IPL-2022 ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಮತ್ತೊಂದು ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಾರ್ಚ್ 28 ರಂದು ಆಡಲಿದೆ.
mohit-sharma-joins-net-bowler -gujarat-titans









