Smriti Mandhana | 5000 ರನ್ಸ್ ಪೂರೈಸಿದ ಸ್ಮೃತಿ ಮಂದಾನ
ಟೀಂ ಇಂಡಿಯಾ ಪರ ಸ್ಮೃತಿ ಮಂದಾನ ವಿಶೇಷ ದಾಖಲೆ
5000 ಅಂತರಾಷ್ಟ್ರೀಯ ರನ್ ಗಳಿಸಿದ ಸ್ಮೃತಿ ಮಂದಾನ
ಮೂರು ಮಾದರಿ ಕ್ರಿಕೆಟ್ ಸೇರಿ 5000 ರನ್ ಪೂರೈಕೆ
ಟೆಸ್ಟ್ ನಲ್ಲಿ 325. ODIನಲ್ಲಿ 2717 ರನ್, T 20ಯಲ್ಲಿ 1971 ರನ್
2022ರ ಮಹಿಳಾ ವಿಶ್ವಕಪ್ ಭಾಗವಾಗಿ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ವಿಶೇಷ ದಾಖಲೆ ಬರೆದಿದ್ದಾರೆ.
ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಐಸಿಸಿ ಏಕದಿನ ವಿಶ್ವಕಪ್ನ 22 ನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬಾಂಗ್ಲಾದೇಶಕ್ಕೆ ಗೆಲ್ಲಲು 229 ರನ್ ಗಳ ಗುರಿ ನೀಡಿದೆ. ಈ ಪಂದ್ಯದಲ್ಲಿ ಸ್ಮೃತಿ ಮಂದಾನ 51 ಎಸೆತಗಳಲ್ಲಿ 30 ರನ್ ಗಳಿಸಿ ಔಟ್ ಆದರು.
ಆದ್ರೆ ಈ ಪಂದ್ಯದಲ್ಲಿ 17 ರನ್ ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಮಂದಾನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 2717 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ 325 ರನ್ ಗಳಿಸಿದ್ದಾರೆ. ಇದಲ್ಲದೇ T20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 1971 ರನ್ ಗಳಿಸಿದ್ದಾರೆ.
ಈ ಎಲ್ಲಾ ಮೂರು ಫಾರ್ಮ್ಯಾಟ್ಗಳನ್ನು ಒಟ್ಟುಗೂಡಿಸಿ, ಸ್ಮೃತಿ ಮಂಧಾನ ಈಗ 5000 ರನ್ಗಳ ಗಡಿಯನ್ನು ಮುಟ್ಟಿದ್ದಾರೆ. ಈ ಹಿಂದೆ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ಮತ್ತು ಹರ್ಮನ್ಪ್ರೀತ್ ಕೌರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 5ಸಾವಿರ ರನ್ ಪೂರೈಸಿದ್ದಾರೆ.