Zomato | 10 ನಿಮಿಷದಲ್ಲಿ ಫುಡ್ ಡೆಲಿವರಿ
ಝೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಸ್ಪಷ್ಟನೆ
ಪ್ರಾಮಾಣಿಕೃತ ಮೆನು ಐಟಂಗಳಿಗೆ ಮಾತ್ರ ಸೀಮಿತ
10 ರಿಂದ 20 ನಿಮಿಷಗಳ ಡೆಲಿವರಿಗೆ ಪ್ರಯತ್ನ
ಡೆಲಿವರಿ ತಡವಾದಲ್ಲಿ ದಂಡ ವಿಧಿಸುವಂತಹ ಕ್ರಮಗಳಿಲ್ಲ
ನವದೆಹಲಿ : ಝೋಮ್ಯಾಟೋದಲ್ಲಿ ತಿಂಡಿ ಆರ್ಡರ್ ಮಾಡಿದ್ರೆ ಕೇವಲ 10 ನಿಮಿಷಗಳಲ್ಲಿ ಗ್ರಾಹಕರ ಮನೆ ತಲುಪಿಸುವ ಹೊಸ ಯೋಜನೆಯನ್ನು ಕಂಪನಿ ಘೋಷಣೆ ಮಾಡಿತ್ತು. ಈ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು.
ಇದೀಗ ಈ ಎಲ್ಲಾ ಗೊಂದಲಗಳಿಗೆ ಝೋಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
10 ನಿಮಿಷಗಳಲ್ಲಿ ಡೆಲಿವರಿ ಅಂದರೇ ಅದು ನಿರ್ದಿಷ್ಟ, ಹತ್ತಿರದ ಸ್ಥಳಗಳಿಗೆ, ಜನಪ್ರಿಯ ಹಾಗೂ ಪ್ರಾಮಾಣಿಕೃತ ಮೆನು ಐಟಂಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ದೀಪಿಂದರ್ ತಿಳಿಸಿದ್ದಾರೆ.
10 ರಿಂದ 20 ನಿಮಿಷಗಳ ಡೆಲಿವರಿಗೆ ಪ್ರಯತ್ನ ಪಡಲಾಗುತ್ತದೆ. ಆದರೆ ನಿರ್ದಿಷ್ಟ ಸಮಯದ ಭರವಸೆ ನೀಡಲಾಗುವುದಿಲ್ಲ.
ಒಂದು ವೇಳೆ ಡೆಲಿವರಿ ತಡವಾದಲ್ಲಿ ದಂಡ ವಿಧಿಸುವಂತಹ ಕ್ರಮಗಳಿಲ್ಲ ಎಂದು ದೀಪಿಂದರ್ ತಿಳಿಸಿದ್ದಾರೆ.
ಇಲ್ಲದೇ 10 ನಿಮಿಷಗಳ ಡೆಲಿವರಿ ಸೇವೆಗೆ ಕೆಲವು ನಿರ್ದಿಷ್ಟ ಗ್ರಾಹಕ ಸ್ಥಳಗಳಲ್ಲಿ ಮಾತ್ರ ಹೊಸ ಆಹಾರ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. Food Delivery in 10mins by Zomato