KGF 2 | ಕೆಜಿಎಫ್ 2’ ಚಿತ್ರತಂಡದಿಂದ ಭರ್ಜರಿ ಆಫರ್!
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಪ್ರಯತ್ನ
ಅಭಿಮಾನಿಗಳಿಂದ ತಯಾರಾದ ಕಲಾಕೃತಿ ಬಳಸಿ ಪ್ರಚಾರ
ಪ್ರಶಾಂತ್ ನೀಲ್ ಕೆಜಿಎಫ್ ಆರ್ಭಟದಲ್ಲಿ ಅಭಿಮಾನಿಗಳ ಪಾಲು
ಹೊಂಬಾಳೆ ಫಿಲ್ಮ್ಸ್ ಟ್ವಿಟ್ಟರ್ ಖಾತೆಯಲ್ಲಿ ನಿರ್ಮಾಪಕ ಮಾಹಿತಿ
ಬೆಂಗಳೂರು : ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಭಾರತೀಯ ಚಿತ್ರರಂಗ ಕಾದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ 2018ರಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ಏಪ್ರಿಲ್ 14 ರಂದು ರಿಲೀಸ್ ಆಗಲಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.
ಈ ನಡುವೆ ಕೆಜಿಎಫ್ ಸಿನಿಮಾ ತಂಡ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಅಭಿಮಾನಿಗಳನ್ನು ಚಿತ್ರಕ್ಕೆ ಮತ್ತಷ್ಟು ಹತ್ತಿರವಾಗಿಸಲು ಚಿತ್ರತಂಡ ನಿರ್ಧರಿಸಿದ್ದು, ಅಭಿಮಾನಿಗಳಿಂದ ತಯಾರಾದ ಕಲಾಕೃತಿ ಬಳಸಿ ಪ್ರಚಾರ ಮಾಡಲು ಚಿಂತನೆ ನಡೆಸಿದೆ.
ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಪೂರ್ಣ ವಿವರ ನೀಡಿದೆ. ಕಲಾವಿದರು, ಗ್ರಾಫಿಕ್ಸ್ ಡಿಸೈನ್ ಗಳಲ್ಲಿ ಆಸಕ್ತಿಯುಳ್ಳವರು ತಾವು ರಚಿಸಿದ ‘ರಾಕಿ ಭಾಯ್’ ಕಲಾಕೃತಿಗಳನ್ನು ಹೊಂಬಾಳೆ ಫಿಲ್ಮ್ಸ್ ಜತೆ ಹಂಚಿಕೊಳ್ಳಬಹುದು. ಅದು ಚಿತ್ರತಂಡ ವಿಶ್ವಾದ್ಯಂತ ನಡೆಸಲಿರುವ ಪ್ರಚಾರದ ಭಾಗವಾಗಲಿದೆ ಎಂದು ಬರೆದುಕೊಂಡಿದೆ.
ಇದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಅಭಿಮಾನಿಗಳು ತಾವು ರಚಿಸಿರುವ ಪೋಸ್ಟರ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.KGF 2 movie team to provide exclusive offer for fans