Evin lewis | ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಶಾಕ್
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸತತ ಗೆಲುವುಗಳೊಂದಿಗೆ ಉತ್ತಮ ಸ್ವಿಂಗ್ ನಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗುವ ಸಾಧ್ಯತೆಗಳಿವೆ.
ತಂಡದ ವಿಧ್ವಂಸಕ ಆಟಗಾರ ಅವಿನ್ ಲೂಯಿಸ್ ಗಾಯದ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಏಪ್ರಿಲ್ 4 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಬಾರಿಸಿದ ಚೆಂಡನ್ನ ನಿಲ್ಲಿಸುವ ವೇಳೆ ಲೂಯಿಸ್ ಗಾಯಗೊಂಡಿದ್ದಾರೆ.
ಹೀಗಾಗಿ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅವರ ಲಭ್ಯತೆ ಅನುಮಾನವಾಗಿದೆ.
ಎವಿನ್ ಲೂಯಿಸ್ ಒಂದು ವೇಳೆ ಪಂದ್ಯದಿಂದ ದೂರವಾದ್ರೆ ಅವರ ಸ್ಥಾನದಲ್ಲಿ ಕೆರಿಬಿಯನ್ ಆಟಗಾರ ಕೈಲ್ ಮೈಯರ್ಸ್ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆಯಬಹುದು.
ಈ ಋತುವಿನಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ಲೂಯಿಸ್ 66 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್ನಲ್ಲಿ ಅರ್ಧಶತಕ ಕೂಡ ಇದೆ.
evin-lewis-likely-miss-delhi-capitals-match