Sachin Tendulkar | ಸಿಂಗರ್ ಆದ ಸಚಿನ್ ತೆಂಡುಲ್ಕರ್..
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಡೋಂದನ್ನ ಹಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆದ್ರೆ ಇದು ಪ್ರಮೋಷನ್ ಸಾಂಗ್ ಅಲ್ಲ. ಬದಲಿಗೆ ಪುಣೆಯಿಂದ ಮುಂಬೈಗೆ ಹೋಗುವಾಗ ಕಿರಣ್ ಮೋರೆ ಅವರೊಂದಿಗೆ ಸಚಿನ್ ಹಾಡು ಹಾಡಿದ್ದಾರೆ.
ತಮ್ಮ ನೆಚ್ಚಿನ ಸಿಂಗರ್ ಹೇಮಂತ್ ಕುಮಾರ್ ಹಾಡಿದ ಜನಪ್ರಿಯ ಮರಾಠಿ ಹಾಡನ್ನು ಸಚಿನ್ ಗುನುಗಿದ್ದಾರೆ. ಮೋರೆ ಕೂಡ ಸಚಿನ್ ಗೆ ಸಾಥ್ ನೀಡಿದ್ದಾರೆ.
ಈ ವಿಡಿಯೋವನ್ನ ಸಚಿನ್ ತೆಂಡುಲ್ಕತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಸಚಿನ್ ಗೆ ಸಂಗೀತವೆಂದರೇ ತುಂಬಾ ಇಷ್ಟ. ಅವರು ಬಾಲಿವುಡ್ ಮತ್ತು ಮರಾಠಿ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಾರೆ.
ಸಚಿನ್ ಈ ಹಿಂದೆ ಸೋನು ನಿಗಮ್ ಜೊತೆ ಒಂದು ಹಾಡನ್ನು ಹಾಡಿದ್ದರು. ಕ್ರಿಕೆಟ್ ದೇವರು ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೆಂಟರ್ ಆಗಿದ್ದಾರೆ. Sachin-tendulkar-sings-hemant-kumar-famous-marathi-song
Stuck in traffic while heading to Pune.
Thought of listening to this lovely song! 🎶
मी डोलकर डोलकर डोलकर दर्याचा राजा…
पुण्याला करतोय ये जा… pic.twitter.com/jyCYKqjoPK— Sachin Tendulkar (@sachin_rt) April 5, 2022