ADVERTISEMENT
Friday, April 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

RCB | ಕೊಹ್ಲಿ ನಿಜವಾಗ್ಲೂ ಔಟ್ ಆಗಿದ್ರಾ..?

Mahesh M Dhandu by Mahesh M Dhandu
April 10, 2022
in Marjala Manthana, Newsbeat, ಮಾರ್ಜಲ ಮಂಥನ
virat-kohli-Michael Vaughan advises Virat Kohli to rediscover his youthfulness saaksha tv

virat-kohli-Michael Vaughan advises Virat Kohli to rediscover his youthfulness saaksha tv

Share on FacebookShare on TwitterShare on WhatsappShare on Telegram

ಕೊಹ್ಲಿ ನಿಜವಾಗ್ಲೂ ಔಟ್ ಆಗಿದ್ರಾ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್  ವಿರುದ್ಧದ ಪಂದ್ಯದಲ್ಲಿ ನಿಜವಾಗ್ಲೂ ಔಟ್ ಆದ್ರಾ..? ಬಾಲ್ ಬ್ಯಾಟ್ ಮತ್ತು ಪ್ಯಾಡ್ ಗೆ ಟಚ್ ಆದ್ರೂ ವಿರಾಟ್ ಕೊಹ್ಲಿ ಔಟ್ ಆಗಿದ್ದು ಹೇಗೆ..? ಅನ್ನೋ ಪ್ರಶ್ನೆಗಳು  ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆ ಕಾರಣ ಕೂಡ ಇದೆ..

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದೆ. ಫಾಫ್ ಡುಪ್ಲಸಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮುಂಬೈ ಪರ ರೋಹಿತ್ ಶರ್ಮಾ ಮತ್ತು ಕಿಶಾನ್ ಕಿಶಾನ್ ಉತ್ತಮ ಆರಂಭವನ್ನ ನೀಡಿದರು. ಆದ್ರೆ ಇಬ್ಬರ ಹೋರಾಟ ತಲಾ 26 ರನ್ ಗಳಿಗೆ ಅಂತ್ಯವಾಗುತ್ತೆ. ಇದಾದ ಬಳಿಕ ಆರ್ ಸಿಬಿ ಬೌಲರ್ ಗಳು ಮುಂಬೈ ಇಂಡಿಯನ್ಸ್ ಬ್ಯಾಟರ್ ಗಳ ಬೇಟೆಯಾಡುತ್ತಾರೆ.

ಪರಿಣಾಮ ಮುಂಬೈ ಇಂಡಿಯನ್ಸ್ 79 ರನ್ ಗಳಿಗೆ ಪ್ರಮುಖ ಆರು ವಿಕೆಟ್ ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕುತ್ತೆ. ಇನ್ನೇನು ಮುಂಬೈ ಇಂಡಿಯನ್ಸ್ ತಂಡ ಅತಿ ಮೊತ್ತಕ್ಕೆ ಆಲೌಟ್ ಆಗುತ್ತೆ ಅಂತಾ ಎಲ್ಲರೂ ಅಂದುಕೊಂಡಿದ್ರೂ ಆದ್ರೆ ಸೂರ್ಯ ಕುಮಾರ್ ಯಾದವ್ ಎಲ್ಲ ಲೆಕ್ಕಾ ಚಾರಗಳನ್ನ ಬುಡಮೇಲು ಮಾಡಿದ್ರು.

ಬಾಲಂಗೋಚಿ ಉನಾದ್ಕಟ್ ಅವರೊಂದಿಗೆ ಬರೋಬ್ಬರಿ 72 ರನ್ ಗಳ ಜೊತೆಯಾಟವಾಡಿದ್ರು. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರನ್ನ ಟಾರ್ಗೆಟ್ ಮಾಡಿದ ಸೂರ್ಯ ಕುಮಾರ್ ಮುಟ್ಟಿ ನೋಡಿಕೊಳ್ಳುವಂತೆ ಬಾರಿಸಿದ್ರು.

Virat Kohli is adjudged lbw controversially vs MI saaksha tv

ಪರಿಣಾಮ ಮುಂಬೈ ಇಂಡಿಯನ್ಸ್  ತಂಡ, ಪಂದ್ಯ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 152 ರನ್ ಟಾರ್ಗೆಟ್ ನೀಡಿತು. ಆರ್ ಸಿಬಿ ಕೂಡ ಉತ್ತಮ ಆರಂಭ ಪಡೆಯಿತು. ಆದ್ರೆ ನಾಯಕ ಫಾಫ್ ಡುಪ್ಲಸಿ 16 ರನ್ ಗಳಿಗೆ ಔಟ್ ಆದ್ರು. ಆದ್ರೆ ವಿರಾಟ್ ಕೊಹ್ಲಿ ಅನೂಜ್ ರಾವತ್ ತಂಡಕ್ಕೆ ಆಸರೆಯಾದ್ರು. ಜೊತೆಗೆ ತಂಡದ ಗೆಲುವನ್ನ ಪಕ್ಕಾ ಮಾಡಿದ್ರು.

ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿತ್ತು. ಆದ್ರೆ 18 ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದು, ಕೊಂಚ ಗೊಂದಲಕ್ಕೆ ಕಾರಣವಾಗಿದೆ. ಯಾಕಂದರೆ ವಿರಾಟ್ ಮುಂಬೈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಅನೂಜ್ ಗೆ ಗೈಡ್ ಮಾಡುತ್ತಾ, ತನ್ನ ಸ್ಕೋರ್ ಹೆಚ್ಚಿಸಿಕೊಳ್ಳುತ್ತಾ ತಂಡದ ಗೆಲುವಿಗೆ ಶ್ರಮಿಸುತ್ತಿದ್ದರು.

ಜೊತೆಗೆ ಅರ್ಧಶತಕದ ಅಂಚಿಗೂ ಬಂದ್ರು. ಇನ್ನೇನು ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಅರ್ಧ ಶತಕ ಸಿಡಿಸ್ತಾರೆ ಅಂತಾ ಆರ್ ಸಿಬಿ ಅಭಿಮಾನಿಗಳು ಅಂದುಕೊಂಡಿದ್ದರು.

ಆದ್ರೆ ಬ್ರೆವಿಸ್ ಎಸೆದ ಬಾಲ್ ನೇರವಾಗಿ ವಿರಾಟ್ ಕಾಲಿಗೆ ಬಿತ್ತು. ಅಂಪೈರ್ ಔಟ್ ಅಂತಾ ಘೋಷಿಸಿದರು. ತಕ್ಷಣ ವಿರಾಟ್ ಡಿಆರ್ ಎಸ್ ಮೊರೆ ಹೋದ್ರು. ಇಲ್ಲಿ ಫೀಲ್ಡ್ ಅಂಪೈರ್ ಔಟ್ ಎನ್ನುತ್ತಿದ್ದಂತೆ ಆರ್ ಸಿಬಿ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿತ್ತು.

 ಆದ್ರೆ ವಿರಾಟ್ ಡಿಆರ್ ಎಸ್ ಮೊರೆ ಹೋಗುತ್ತಿದ್ದಂತೆ ಅಭಿಮಾನಿಗಳು ಕೂಡ ನಾಟೌಟ್ ಆಗಿರಬಹುದು ಅಂತಾ ನಿರೀಕ್ಷೆಯನ್ನ ಇಟ್ಟುಕೊಂಡಿದ್ರು. ಅಲ್ಟ್ರಾ ಟಚ್ ನಲ್ಲಿ ಬಾಲ್ ಪ್ಯಾಡ್ ಮತ್ತು ಬ್ಯಾಟ್ ಗೆ ಟಚ್ ಆಗಿರೋದು ಕ್ಲಿಯರ್ ಆಗಿ ಗೊತ್ತಾಗುತ್ತಿತ್ತು.

ಇದರಿಂದ ಅಭಿಮಾನಿಗಳು ನಾಟೌಟ್ ಎಂದುಕೊಂಡಿದ್ದರು. ಆದರೆ ಮೂರನೇ ಅಂಪೈರ್, ಫೀಲ್ಡ್ ಅಂಪೈರ್ ತೀರ್ಮಾನಕ್ಕೆ ಜೈ ಎಂದ್ರು. ಇದರಿಂದ ಸಿಟ್ಟಾದ ವಿರಾಟ್ ಕೊಹ್ಲಿ, ಕೋಪದಲ್ಲಿಯೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು.

ಜೊತೆಗೆ ಬ್ಯಾಟ್ ಅನ್ನ ಪ್ಯಾಟ್ ಗೆ ಹೊಡೆದು ಕೋಪ ಹೊರಹಾಕಿದ್ರು. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.  ಬಾಲ್ ಬ್ಯಾಟ್ ಗೆ ಟನ್ ಆದ್ರೂ ವಿರಾಟ್ ಔಟ್ ಆಗಿದ್ದು ಯಾಕೆ ಅನ್ನೋ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.

ಆದ್ರೆ ಅಲ್ಲಿ ಬಾಲ್ ಮೊದಲು ಪ್ಯಾಡ್ ಗೆ ಟಚ್ ಆಗಿರುತ್ತೆ. ಅದಕ್ಕೆ ಅಂಪೈರ್ ಔಟ್ ಅಂತಾ ಘೋಷಣೆ ಮಾಡಿದ್ದಾರೆ. ಅದು ಏನೇ ಇರಲಿ. ತುಂಬಾ ದಿನಗಳ ಬಳಿಕ ವಿರಾಟ್ ಅರ್ಧಶತಕದ ಸಂಭ್ರಮ ನೋಡಬಹುದು ಅಂದುಕೊಂಡಿದ್ದವರಿಗೆ ನಿರಾಸೆಯಾಗಿದ್ದಂತೂ ನಿಜ.

Virat Kohli is adjudged lbw controversially vs MI

Related posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

April 24, 2026
150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

April 24, 2026
Tags: #Saaksha TVipl 2022RCBvirat kohli
ShareTweetSendShare
Join us on:

Related Posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

by Shwetha
April 24, 2026
0

ತುಮಕೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಅತಿ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಗಂಭೀರ ಆರೋಪದ...

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

by Shwetha
April 24, 2026
0

ಭಾರತ ಇಂದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಆದರೆ ಇದೇ 150 ಕೋಟಿ ಜನಸಂಖ್ಯೆಯ ಮೇಲೆ ಇಂದು ಮೈಕ್ರೋಪ್ಲಾಸ್ಟಿಕ್ ಎಂಬ ಸದ್ದಿಲ್ಲದ ಕೊಲೆಗಾರ ದಾಳಿ...

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

by Shwetha
April 24, 2026
0

ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೆಗೆದುಕೊಂಡ ನಿರ್ಧಾರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತಾಗಿದೆ...

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಈಗ ತಮಾಷೆಯನ್ನೂ ಮಾಡುವಂತಿಲ್ಲ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ

by Shwetha
April 24, 2026
0

ಬೆಂಗಳೂರು: ಕಬಡ್ಡಿ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ಕುರಿತು ನೀಡಿದ್ದ ಹೇಳಿಕೆ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು...

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

by Shwetha
April 24, 2026
0

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram