ಕೊಹ್ಲಿ ನಿಜವಾಗ್ಲೂ ಔಟ್ ಆಗಿದ್ರಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ ವಿರುದ್ಧದ ಪಂದ್ಯದಲ್ಲಿ ನಿಜವಾಗ್ಲೂ ಔಟ್ ಆದ್ರಾ..? ಬಾಲ್ ಬ್ಯಾಟ್ ಮತ್ತು ಪ್ಯಾಡ್ ಗೆ ಟಚ್ ಆದ್ರೂ ವಿರಾಟ್ ಕೊಹ್ಲಿ ಔಟ್ ಆಗಿದ್ದು ಹೇಗೆ..? ಅನ್ನೋ ಪ್ರಶ್ನೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆ ಕಾರಣ ಕೂಡ ಇದೆ..
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದೆ. ಫಾಫ್ ಡುಪ್ಲಸಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮುಂಬೈ ಪರ ರೋಹಿತ್ ಶರ್ಮಾ ಮತ್ತು ಕಿಶಾನ್ ಕಿಶಾನ್ ಉತ್ತಮ ಆರಂಭವನ್ನ ನೀಡಿದರು. ಆದ್ರೆ ಇಬ್ಬರ ಹೋರಾಟ ತಲಾ 26 ರನ್ ಗಳಿಗೆ ಅಂತ್ಯವಾಗುತ್ತೆ. ಇದಾದ ಬಳಿಕ ಆರ್ ಸಿಬಿ ಬೌಲರ್ ಗಳು ಮುಂಬೈ ಇಂಡಿಯನ್ಸ್ ಬ್ಯಾಟರ್ ಗಳ ಬೇಟೆಯಾಡುತ್ತಾರೆ.
ಪರಿಣಾಮ ಮುಂಬೈ ಇಂಡಿಯನ್ಸ್ 79 ರನ್ ಗಳಿಗೆ ಪ್ರಮುಖ ಆರು ವಿಕೆಟ್ ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕುತ್ತೆ. ಇನ್ನೇನು ಮುಂಬೈ ಇಂಡಿಯನ್ಸ್ ತಂಡ ಅತಿ ಮೊತ್ತಕ್ಕೆ ಆಲೌಟ್ ಆಗುತ್ತೆ ಅಂತಾ ಎಲ್ಲರೂ ಅಂದುಕೊಂಡಿದ್ರೂ ಆದ್ರೆ ಸೂರ್ಯ ಕುಮಾರ್ ಯಾದವ್ ಎಲ್ಲ ಲೆಕ್ಕಾ ಚಾರಗಳನ್ನ ಬುಡಮೇಲು ಮಾಡಿದ್ರು.
ಬಾಲಂಗೋಚಿ ಉನಾದ್ಕಟ್ ಅವರೊಂದಿಗೆ ಬರೋಬ್ಬರಿ 72 ರನ್ ಗಳ ಜೊತೆಯಾಟವಾಡಿದ್ರು. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರನ್ನ ಟಾರ್ಗೆಟ್ ಮಾಡಿದ ಸೂರ್ಯ ಕುಮಾರ್ ಮುಟ್ಟಿ ನೋಡಿಕೊಳ್ಳುವಂತೆ ಬಾರಿಸಿದ್ರು.
ಪರಿಣಾಮ ಮುಂಬೈ ಇಂಡಿಯನ್ಸ್ ತಂಡ, ಪಂದ್ಯ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 152 ರನ್ ಟಾರ್ಗೆಟ್ ನೀಡಿತು. ಆರ್ ಸಿಬಿ ಕೂಡ ಉತ್ತಮ ಆರಂಭ ಪಡೆಯಿತು. ಆದ್ರೆ ನಾಯಕ ಫಾಫ್ ಡುಪ್ಲಸಿ 16 ರನ್ ಗಳಿಗೆ ಔಟ್ ಆದ್ರು. ಆದ್ರೆ ವಿರಾಟ್ ಕೊಹ್ಲಿ ಅನೂಜ್ ರಾವತ್ ತಂಡಕ್ಕೆ ಆಸರೆಯಾದ್ರು. ಜೊತೆಗೆ ತಂಡದ ಗೆಲುವನ್ನ ಪಕ್ಕಾ ಮಾಡಿದ್ರು.
ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿತ್ತು. ಆದ್ರೆ 18 ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದು, ಕೊಂಚ ಗೊಂದಲಕ್ಕೆ ಕಾರಣವಾಗಿದೆ. ಯಾಕಂದರೆ ವಿರಾಟ್ ಮುಂಬೈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಅನೂಜ್ ಗೆ ಗೈಡ್ ಮಾಡುತ್ತಾ, ತನ್ನ ಸ್ಕೋರ್ ಹೆಚ್ಚಿಸಿಕೊಳ್ಳುತ್ತಾ ತಂಡದ ಗೆಲುವಿಗೆ ಶ್ರಮಿಸುತ್ತಿದ್ದರು.
ಜೊತೆಗೆ ಅರ್ಧಶತಕದ ಅಂಚಿಗೂ ಬಂದ್ರು. ಇನ್ನೇನು ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಅರ್ಧ ಶತಕ ಸಿಡಿಸ್ತಾರೆ ಅಂತಾ ಆರ್ ಸಿಬಿ ಅಭಿಮಾನಿಗಳು ಅಂದುಕೊಂಡಿದ್ದರು.
ಆದ್ರೆ ಬ್ರೆವಿಸ್ ಎಸೆದ ಬಾಲ್ ನೇರವಾಗಿ ವಿರಾಟ್ ಕಾಲಿಗೆ ಬಿತ್ತು. ಅಂಪೈರ್ ಔಟ್ ಅಂತಾ ಘೋಷಿಸಿದರು. ತಕ್ಷಣ ವಿರಾಟ್ ಡಿಆರ್ ಎಸ್ ಮೊರೆ ಹೋದ್ರು. ಇಲ್ಲಿ ಫೀಲ್ಡ್ ಅಂಪೈರ್ ಔಟ್ ಎನ್ನುತ್ತಿದ್ದಂತೆ ಆರ್ ಸಿಬಿ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿತ್ತು.
ಆದ್ರೆ ವಿರಾಟ್ ಡಿಆರ್ ಎಸ್ ಮೊರೆ ಹೋಗುತ್ತಿದ್ದಂತೆ ಅಭಿಮಾನಿಗಳು ಕೂಡ ನಾಟೌಟ್ ಆಗಿರಬಹುದು ಅಂತಾ ನಿರೀಕ್ಷೆಯನ್ನ ಇಟ್ಟುಕೊಂಡಿದ್ರು. ಅಲ್ಟ್ರಾ ಟಚ್ ನಲ್ಲಿ ಬಾಲ್ ಪ್ಯಾಡ್ ಮತ್ತು ಬ್ಯಾಟ್ ಗೆ ಟಚ್ ಆಗಿರೋದು ಕ್ಲಿಯರ್ ಆಗಿ ಗೊತ್ತಾಗುತ್ತಿತ್ತು.
ಇದರಿಂದ ಅಭಿಮಾನಿಗಳು ನಾಟೌಟ್ ಎಂದುಕೊಂಡಿದ್ದರು. ಆದರೆ ಮೂರನೇ ಅಂಪೈರ್, ಫೀಲ್ಡ್ ಅಂಪೈರ್ ತೀರ್ಮಾನಕ್ಕೆ ಜೈ ಎಂದ್ರು. ಇದರಿಂದ ಸಿಟ್ಟಾದ ವಿರಾಟ್ ಕೊಹ್ಲಿ, ಕೋಪದಲ್ಲಿಯೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು.
ಜೊತೆಗೆ ಬ್ಯಾಟ್ ಅನ್ನ ಪ್ಯಾಟ್ ಗೆ ಹೊಡೆದು ಕೋಪ ಹೊರಹಾಕಿದ್ರು. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಬಾಲ್ ಬ್ಯಾಟ್ ಗೆ ಟನ್ ಆದ್ರೂ ವಿರಾಟ್ ಔಟ್ ಆಗಿದ್ದು ಯಾಕೆ ಅನ್ನೋ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.
ಆದ್ರೆ ಅಲ್ಲಿ ಬಾಲ್ ಮೊದಲು ಪ್ಯಾಡ್ ಗೆ ಟಚ್ ಆಗಿರುತ್ತೆ. ಅದಕ್ಕೆ ಅಂಪೈರ್ ಔಟ್ ಅಂತಾ ಘೋಷಣೆ ಮಾಡಿದ್ದಾರೆ. ಅದು ಏನೇ ಇರಲಿ. ತುಂಬಾ ದಿನಗಳ ಬಳಿಕ ವಿರಾಟ್ ಅರ್ಧಶತಕದ ಸಂಭ್ರಮ ನೋಡಬಹುದು ಅಂದುಕೊಂಡಿದ್ದವರಿಗೆ ನಿರಾಸೆಯಾಗಿದ್ದಂತೂ ನಿಜ.
Virat Kohli is adjudged lbw controversially vs MI