IPL 2022 | ಧೋನಿಗೆ ಒಂದು ನ್ಯಾಯ.. ಪಂತ್ ಗೆ ಒಂದು ನ್ಯಾಯ ಯಾಕೆ..?
ಧೋನಿಗೆ ಒಂದು ನ್ಯಾಯ.. ರಿಷಬ್ ಪಂತ್ ಗೆ ಒಂದು ನ್ಯಾಯ ಯಾಕೆ..? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಪ್ರಶ್ನೆ ಇದು.
ಇದಕ್ಕೆ ಪ್ರಮುಖ ಕಾರಣ ಒಂದೇ ರೀತಿಯ ಪ್ರಕರಣದಲ್ಲಿ ಧೋನಿ – ಪಂತ್ ವಿಚಾರದಲ್ಲಿ ಐಪಿಎಲ್ ಆಡಳಿತ ಮಂಡಳಿ ನಡೆದುಕೊಂಡ ರೀತಿ.
ಹೌದು..! ರಾಜಸ್ಥಾನ್ ರಾಯಲ್ಸ್ ತಂಡ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಡೆಲ್ಲಿಗೆ 36 ರನ್ ಗಳ ಅವಶ್ಯಕತೆ ಇತ್ತು.
ಆಗ ನೋ ಬಾಲ್ ವಿಚಾರವಾಗಿ ಡೆಲ್ಲಿ ಡಗೌಟ್ ನಲ್ಲಿ ಗೊಂದಲ ಉಂಟಾಗಿತ್ತು.
ಡೆಲ್ಲಿ ನಾಯಕ ರಿಷಬ್ ಪಂತ್, ಕ್ರೀಸ್ ನಲ್ಲಿದ್ದ ಆಟಗಾರರನ್ನು ವಾಪಸ್ ಬರುವಂತೆ ಕರೆದರು.
ಅಲ್ಲದೇ ಡೆಲ್ಲಿ ತಂಡದ ಸಹ ಕೋಚ್ ಅವರನ್ನು ಮೈದಾನಕ್ಕೆ ಕಳುಹಿಸಿದರು.
ಹೀಗಾಗಿ ಐಪಿಎಲ್ ಆಡಳಿತ ಮಂಡಳಿ ಪಂತ್ ಗೆ ಪಂದ್ಯದ ಶೇಕಡಾ 100 ರಷ್ಟು ದಂಡ ವಿಧಿಸಿದೆ.

ಆದ್ರೆ ಇಂತಹದ್ದೇ ಪ್ರಕರಣ ಈ ಹಿಂದೆ 2019ರಲ್ಲಿ ನಡೆದಿತ್ತು.
ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ಮೂರು ಎಸೆತಗಳಲ್ಲಿ 8 ರನ್ ಗಳ ಅವಶ್ಯಕತೆ ಇತ್ತು.
ಆಗ ಬೌಲ್ ಮಾಡುತ್ತಿದ್ದ ಬೌಲರ್ ಪುಲ್ ಟಾಸ್ ಹಾಕಿದರು.
ಇದನ್ನ ಫೀಲ್ಡ್ ಅಂಪೈರ್ ನೋ ಬಾಲ್ ಎಂದು ಘೋಷಿಸದೇ ಇದ್ದಿದ್ದಕ್ಕಾಗಿ ಸ್ವತಃ ಧೋನಿಯೇ ಡಗೌಟ್ ನಿಂದ ಮೈದಾನಕ್ಕೆ ಬಂದು ಅಂಪೈರ್ ಬಳಿ ವಾಗ್ವಾದ ನಡೆಸಿದ್ದರು.
ಆಗ ಧೋನಿಗೆ ಐಪಿಎಲ್ ಮಂಡಳಿ ಕೇವಲ ಶೇ 50 ರಷ್ಟು ಮಾತ್ರ ದಂಡ ವಿಧಿಸಿತ್ತು.
ಇದನ್ನ ಉಲ್ಲೇಖಿಸಿ ಪಂತ್ ಅಭಿಮಾನಿಗಳು ಸೋಶೀಯಲ್ ಮೀಡಿಯಾದಲ್ಲಿ ಐಪಿಎಲ್ ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ. ipl-2022-dhoni-storms-field-confront-umpire-over-no-ball rishab pant








