Pan India Movies : ಪ್ಯಾನ್ ಇಂಡಿಯಾ ಸಿನಿಮಾ ಸಕ್ಸಸ್.. ಆತಂಕದಲ್ಲಿ ಕಾಲಿವುಡ್
ಪುಷ್ಪ, ಆರ್ ಆರ್ ಆರ್, ಕೆಜಿಎಫ್2 ಮುಂತಾದ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದ್ದು, ತಮಿಳು ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಆರ್ ಆರ್ ಆರ್ ಸಿನಿಮಾಗಳು ಭಾಷಾ ಬೌಂಡರಿಗಳನ್ನು ದಾಟಿ ಭಾರಿ ಯಶಸ್ಸು ಕಾಣುತ್ತಿವೆ.
ಹೀಗಾಗಿ ತಮಿಳು ಚಿತ್ರರಂಗದಲ್ಲಿ ಈ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಕನ್ನಡ, ತೆಲುಗು ಚಿತ್ರರಂಗದ ಬಂದ ಸಿನಿಮಾಗಳು ಅಬ್ಬರಿಸುತ್ತಿವೆ. ಹೀಗಾಗಿ ತಮಿಳು ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ತಮಿಳು ಚಿತ್ರರಂಗ ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ಸೋಮವಾರ ನಡೆದ ಸಾಫ್ಟ್ ವೇರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿರತ್ನಂ ಮಾತನಾಡಿ, ತಮಿಳು ಚಿತ್ರರಂಗ ಇತರ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುತ್ತಿರುವುದರಿಂದ ಆತಂಕ ಪಡುವಂಥದ್ದೇನೂ ಇಲ್ಲ.
ನಮ್ಮ ಚಂದ್ರಲೇಖಾ ಸಿನಿಮಾ ಈ ಹಿಂದೆಯೇ ಹಿಂದಿಯಲ್ಲಿ ಯಶಸ್ಸು ಕಂಡಿತ್ತು. ಅದೇ ರೀತಿ ದಕ್ಷಿಣ ಚಿತ್ರರಂಗ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಭಾರತೀಯ ಸಿನಿಮಾ ಗುಣಮಟ್ಟ ಹೆಚ್ಚಿದೆ. ಆರೋಗ್ಯಕರ ಪೈಪೋಟಿ ಚೆನ್ನಾಗಿದೆ ಎಂದಿದ್ದಾರೆ.
maniratnam-comments-pan-indian-movies









