IPL 2022 | ಗುಜರಾತ್ ಗೆ ಊಹಿಸದ ಶಾಕ್.. ಇಂಗ್ಲೆಂಡ್ ನತ್ತ ಗ್ಯಾರಿ
ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಗುಜರಾತ್ ಟೈಟಾನ್ಸ್ ತಂಡದ ಸತತ ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈವರೆಗೂ ಎಂಟು ಪಂದ್ಯಗಳನ್ನಾಡಿರುವ ಗುಜರಾತ್ ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಯಾವುದೇ ನಿರೀಕ್ಷೆಗಳಿಲ್ಲದೇ ಐಪಿಎಲ್ ಅಖಾಡಕ್ಕಿಳಿದ ಗುಜರಾತ್ ತಂಡವನ್ಉನ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಗ್ಯಾರಿ ಕರ್ಸ್ಟನ್ ತಮ್ಮ ತಂತ್ರಗಳ ಮೂಲಕ ತಂಡದ ಯಶಸ್ಸಿಗೆ ಕಾರಣವಾಗುತ್ತಿದ್ದಾರೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಇತರ ಆಟಗಾರರನ್ನು ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಗುಜರಾತ್ ಟೈಟಾನ್ಸ್ ತಂಡವನ್ನು ಟೈಟಲ್ ಗೆಲ್ಲುವತ್ತ ನಡೆಸುತ್ತಿದ್ದಾರೆ.

ಆದ್ರೆ ಕೆಲವು ಕ್ಷಿಪ್ರ ಬದಲಾವಣೆಗಳ ಕಾರಣದಿಂದಾಗಿ ಗ್ಯಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಶೀಘ್ರದಲ್ಲಿಯೇ ತೊರೆಯುವ ಸಾಧ್ಯತೆಗಳಿವೆ. ಇಂಗ್ಲೆಂಡಿನ ಮುಖ್ಯ ಕೋಚ್ ಹುದ್ದೆಯ ಆಫರ್ ಬಂದಿರುವುದರಿಂದ ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಮತ್ತು ಮೆಂಟರ್ ಜವಾಬ್ದಾರಿಗೆ ಅವರು ಶೀಘ್ರದಲ್ಲೇ ವಿದಾಯ ಹೇಳಲಿದ್ದಾರೆ.
ಕರ್ಸ್ಟನ್ ಅವರ ಹೆಸರನ್ನು ಅಧಿಕೃತವಾಗಿ ಇಂಗ್ಲೆಂಡ್ ಮುಖ್ಯ ಕೋಚ್ ಎಂದು ಘೋಷಿಸಿದರೆ ತಂಡವನ್ನು ಸೇರಿಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್‌ನ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗಿನ ಒಪ್ಪಂದದ ಪ್ರಕಾರ, ಅವರು ಇಂಗ್ಲೆಂಡ್ ಕೋಚ್ ಆಗಿರುವಾಗ ಬೇರೆ ಯಾವುದೇ ತಂಡದಲ್ಲಿ ಕೆಲಸ ಮಾಡುವ ಅವಕಾಶವನ್ನು ಹೊಂದಿರುವುದಿಲ್ಲ. ಇದರೊಂದಿಗೆ ಕರ್ಸ್ಟನ್ ಶೀಘ್ರದಲ್ಲೇ ಐಪಿಎಲ್ ತೊರೆಯಲಿದ್ದಾರೆ ಎಂಬ ಪ್ರಚಾರ ಜೋರಾಗಿದೆ. ipl-2022-gary-kirsten-step-down-gujarat-titans-coach








