BJP | ಡಿಕೆಶಿ ಅವರೇ ಸೋಗಲಾಡಿತನ ಬಿಡಿ
ಬೆಂಗಳೂರು : ಹುಬ್ಬಳ್ಳಿಯಲ್ಲಿ ಯಾರೇ ಆಹಾರ ಕಿಟ್ ವಿರತಿಸಿದ್ದರೂ ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಬಿಜೆಪಿ ತಮ್ಮ ಟ್ವಿಟ್ಟರ್ ನಲ್ಲಿ ಕೆಪಿಸಿಸಿ #ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ಅವರಿಗೂ ನಮಗೂ ಸಂಬಂಧವಿಲ್ಲ ಎಂಬ ಸೋಗಲಾಡಿತನ ಬಿಡಿ. ಫುಡ್ ಕಿಟ್ ಹಂಚಲು ತಯಾರಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇದೆಯೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಈ ರೀತಿ ತಿಪ್ಪೆಸಾರಿಸುವ ಬದಲು ಸತ್ಯ ಒಪ್ಪಿಕೊಳ್ಳಿ ಎಂದು ಕುಟುಕಿದೆ.
ಡಿ.ಕೆ.ಶಿವಕುಮಾರ್ ಟ್ವಿಟ್ಟರ್.. ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ, ಪಿಎಫ್ ಐ ಷಡ್ಯಂತ್ರವಿದೆ. ಸಮಾಜದ ಶಾಂತಿ ಕೆಡಿಸುತ್ತಿರುವ ವಿಹೆಚ್ ಪಿ, ಭಜರಂಗದಳ, ಎಸ್ ಡಿಪಿಐ ನಂಥ ಯಾವುದೇ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಹುಬ್ಬಳ್ಳಿಯಲ್ಲಿ ಯಾರೇ ಆಹಾರ ಕಿಟ್ ವಿರತಿಸಿದ್ದರೂ ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ, ಕಾನೂನಿಗೆ ಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ.. ಹುಬ್ಬಳ್ಳಿ ಗಲಭೆಯ ಆರೋಪಿಗಳಿಗೆ ಆರ್ಥಿಕ ಮತ್ತು ಆಹಾರ ಕಿಟ್ ಒದಗಿಸಲು ಹೊರಟ ಕಾಂಗ್ರೆಸ್ ಶಾಸಕರೊಬ್ಬರನ್ನು ಪ್ರಶ್ನಿಸುವಷ್ಟೂ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲವೇ? ಜಮೀರ್ ಅವರಿಗೆ ನೋಟಿಸ್ ನೀಡಿದರೆ ಸಿದ್ದರಾಮಯ್ಯ ಬಣದಿಂದ ಆಕ್ರೋಶ ವ್ಯಕ್ತವಾಗುವ ಭಯ ಡಿ.ಕೆ.ಶಿವಕುಮಾರ್ ಅವರನ್ನು ಕಾಡುತ್ತಿದೆಯೇ ಎಂದು ಕುಟುಕಿದೆ.
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ. ಹಿಜಾಬ್ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನೇರವಾಗಿ ಸಹಕರಿಸಿದಿರಿ. ಹರ್ಷ ಕೊಲೆಯಾದಾಗ ಅಂತರ ಕಾಯ್ದುಕೊಂಡ ನೀವು ಈಗ ಹುಬ್ಬಳ್ಳಿ ಗಲಭೆಕೋರರಿಗೆ ಆರ್ಥಿಕ ಸಹಾಯ ನೀಡಲು ಹೊರಟಿದ್ದೀರಿ. ಏನಿದೆಲ್ಲ?
ಮಾನ್ಯ @DKShivakumar ಅವರೇ, ನಿಮ್ಮ ಸದಾರಮೆ ನಾಟಕವನ್ನು ನಿಲ್ಲಿಸಿ.
√ ಹಿಜಾಬ್ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನೇರವಾಗಿ ಸಹಕರಿಸಿದಿರಿ.
√ ಹರ್ಷ ಕೊಲೆಯಾದಾಗ ಅಂತರ ಕಾಯ್ದುಕೊಂಡ ನೀವು ಈಗ ಹುಬ್ಬಳ್ಳಿ ಗಲಭೆಕೋರರಿಗೆ ಆರ್ಥಿಕ ಸಹಾಯ ನೀಡಲು ಹೊರಟಿದ್ದೀರಿ.
ಏನಿದೆಲ್ಲ?#CONgressVsCONgress
— BJP Karnataka (@BJP4Karnataka) April 30, 2022
ಅಧಿಕಾರದಲ್ಲಿದ್ದಾಗ ಸಮಾಜ ಘಾತುಕ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿದಿರಿ. ಕಾಂಗ್ರೆಸ್ ಪಕ್ಷದ ಕೃಪಾಶೀರ್ವಾದದಿಂದ ಬೆಳೆದ ಅದೇ ಮತಾಂಧರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಈಗ ತೊಡಗಿಸಿಕೊಂಡಿದ್ದಾರೆ. ನೀವೇ ಬೆಳೆಸಿದ ಸಂಘಟನೆಗಳನ್ನು ಈಗ ನಿಷೇಧಿಸಿ ಎನ್ನುವುದಕ್ಕೆ ಅರ್ಥವಿದೆಯೇ?
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಪಕ್ಷ ಮುನ್ನಡೆಸುವುದಕ್ಕೂ ಸಾಮರ್ಥ್ಯ ಬೇಕು. ಪದೇ ಪದೇ ನಿಮ್ಮ ನಿರ್ದೇಶನಗಳನ್ನು ಉಲ್ಲಂಘಿಸುವ ಸಿದ್ದರಾಮಯ್ಯ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅಂಜುವ ನೀವು #ಅಸಹಾಯಕಅಧ್ಯಕ್ಷ ರೇ?
ಡಿಕೆಶಿ ನೋಟು, ಸಿದ್ದರಾಮಯ್ಯ ಸೂಟು!!!
ಸಿದ್ದರಾಮಯ್ಯ ರಾಜಕೀಯ ಹೊಡೆತ ತಾಳಲಾರದೇ #ಅಸಹಾಯಕಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ?
ಡಿಕೆಶಿ ಅವರೇ, ಹುಬ್ಬಳ್ಳಿ ಗಲಭೆಕೋರರಿಗೆ ಫುಡ್ ಕಿಟ್ ಹಂಚಲು ಹೋದ ಜಮೀರ್ ಅವರಿಗೆ ನೊಟೀಸ್ ನೀಡುವುದು ಬಿಟ್ಟು ಅಂತರ ಕಾಯ್ದುಕೊಂಡಿದ್ದೇಕೆ ?#CONgressVsCONgress
— BJP Karnataka (@BJP4Karnataka) April 30, 2022
ಡಿಕೆಶಿ ನೋಟು, ಸಿದ್ದರಾಮಯ್ಯ ಸೂಟು!!! ಸಿದ್ದರಾಮಯ್ಯ ರಾಜಕೀಯ ಹೊಡೆತ ತಾಳಲಾರದೇ #ಅಸಹಾಯಕಅಧ್ಯಕ್ಷ ಡಿಕೆಶಿ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆಯೇ? ಡಿಕೆಶಿ ಅವರೇ, ಹುಬ್ಬಳ್ಳಿ ಗಲಭೆಕೋರರಿಗೆ ಫುಡ್ ಕಿಟ್ ಹಂಚಲು ಹೋದ ಜಮೀರ್ ಅವರಿಗೆ ನೊಟೀಸ್ ನೀಡುವುದು ಬಿಟ್ಟು ಅಂತರ ಕಾಯ್ದುಕೊಂಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
Karnataka bjp slams d k shivakumar congress









