ವಿರಾಟ್ ಸಕ್ಸಸ್ ಮೂಲ ಮಂತ್ರ ಫಿಟ್ ನೆಸ್
ವಿರಾಟ್ ಕೊಹ್ಲಿ ಫಿಟ್ ನೆಸ್ ಬಗ್ಗೆ ಸಾಕಷ್ಟು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ವ್ಯಕ್ತ ಪಡಿಸುತ್ತಲೇ ಇದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಫಿಟ್ ನೆಸ್ ಬಗ್ಗೆ ಹೆಚ್ಚು ಹೊತ್ತು ಕೊಡುತ್ತಾರೆ. ಒಬ್ಬ ಕ್ರಿಕೆಟ್ ಆಟಗಾರನಿಗೆ ಫಿಟ್ ನೆಸ್ ಎಷ್ಟು ಮುಖ್ಯ ಅನ್ನೋದನ್ನ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ತಿಳಿಸಿದ್ದಾರೆ.
ಹಾಗೆ ವಿರಾಟ್ ಕೊಹ್ಲಿ ಅವರನ್ನ ನೋಡಿ ಅದೆಷ್ಟೋ ಮಂದಿ ಫಿಟ್ ನೆಸ್ ಕಡೆ ಹೆಚ್ಚು ಗಮನಹರಿಸಿರೋದೂ ಉಂಟು.
ಎಂಥಹ ಬ್ಯೂಸಿ ಶೆಡ್ಯುಲ್ ಇದ್ದರೂ, ವಿರಾಟ್ ಕೊಹ್ಲಿ ಪ್ರತಿ ದಿನ ಜಿಮ್ ಗೆ ಹೋಗುತ್ತಾರೆ. ಇದೀಗ ವಿರಾಟ್ ಫಿಟ್ ನೆಟ್ ಬಗ್ಗೆ ಆರ್ ಸಿಬಿ ಒಂದು ವಿಡಿಯೋ ಬಿಡುಗಡೆ ಮಾಡಿದೆ.
ಇದರಲ್ಲಿ ಆರ್ ಸಿಬಿಯ ಸ್ಟ್ರೆಂಥ್ ಅಂಡ್ ಕೋಡಿನೇಟಿಂಗ್ ಕೋಚ್ ಶಂಕರ್ ಬಸು ಮಾತನಾಡಿದ್ದು, ವಿರಾಟ್ ಕೊಹ್ಲಿ ಈಗಲೂ ಚಿಕ್ಕ ಹುಡುಗನಂತೆ ಜಿಮ್ ಗೆ ಬರ್ತಾರೆ. ಅವರು ಇಷ್ಟೋಂದು ಯಶಸ್ಸು ಕಾಣಲು ಅವರ ಫಿಟ್ ನೆಸ್ ಕಾರಣ ಎಂದಿದ್ದಾರೆ.
ಅಂದಹಾಗೆ ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿದ್ದಾರೆ.
ಒಂದೆಡೆರಡು ಪಂದ್ಯಗಳಲ್ಲಿ ಮಿಂಚಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಹೀನಾಯವಾಗಿ ಔಟ್ ಆಗಿದ್ದರು.
ಆದ್ರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದು, ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. RCB Virat Success Mantra Fit Ness









