Ponniyin Selvan | ಮಣಿರತ್ನಂ ಡ್ರೀಮ್ ಪ್ರಜೆಕ್ಟ್ ‘ಪೊನ್ನಿಯನ್ ಸೆಲ್ವನ್’ ಗೆ ಭಾರಿ ಡಿಮ್ಯಾಂಡು
ಸ್ಟಾರ್ ಡೈರೆಕ್ಟರ್ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಚಿತ್ರ ‘ಪೊನ್ನಿಯನ್ ಸೆಲ್ವನ್’ ಸಿನಿಮಾ.
ಮದ್ರಾಸ್ ಟಾಕೀಸ್ ಜೊತೆಗೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ವರ್ಷ ಸೆಪ್ಟೆಂಬರ್ 30 ರಂದು ‘ಪೊನ್ನಿಯನ್ ಸೆಲ್ವನ್’ ಭಾಗ 1 ಅನ್ನು ಬಿಡುಗಡೆ ರಿಲೀಸ್ ಆಗಲಿದೆ.
ಆದರೆ, ‘ಪೊನ್ನಿಯನ್ ಸೆಲ್ವನ್’ ಕಾದಂಬರಿ ಆಧಾರಿತ ಸಿನಿಮಾ ಬಿಡುಗಡೆಗೂ ಮುನ್ನವೇ ಸೂಪರ್ ಪ್ರಿ ರಿಲೀಸ್ ಬ್ಯುಸಿನೆಸ್ ಮಾಡಿದೆ.
ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪ್ರಮುಖ OTT ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋ ಭಾರಿ ಬೆಲೆಗೆ ಖರೀದಿಸಿದೆಯಂತೆ.
ಸುಮಾರು ರೂ. 125 ಕೋಟಿಗೆ ಈ ಹಕ್ಕುಗಳು ಪಡೆದುಕೊಂಡಿದೆ ಅನ್ನೋದು ಸದ್ಯ ಮಾಹಿತಿ.
ಪ್ರಸ್ತುತ, ದೇಶದಲ್ಲಿ ಪ್ಯಾನ್ ಇಂಡಿಯಾ ಚಲನಚಿತ್ರಗಳ ಹವಾ ಇದೆ.
ಈ ಪ್ಯಾನ್ ಇಂಡಿಯಾ ಚಿತ್ರಗಳು ಸೂಪರ್ ಹಿಟ್ ಆಗುವುದರೊಂದಿಗೆ ತೆಲುಗು ಮತ್ತು ಕನ್ನಡ ಚಲನಚಿತ್ರೋದ್ಯಮವು ದೇಶಾದ್ಯಂತ ಮನ್ನಣೆ ಗಳಿಸಿದೆ.
ಹೀಗಾಗಿ ತಮಿಳು ಇಂಡಸ್ಟ್ರಿ ಈ ಸಿನಿಮಾದ ಮೇಲೆ ತನ್ನ ಭರವಸೆಯನ್ನು ಇಟ್ಟುಕೊಂಡಿದೆ.
maniratnam-ponniyin-selvan-ott-rights