ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bangalore | ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ : ಸಿ.ವೇಣುಗೋಪಾಲ್ ಒತ್ತಾಯ

Mahesh M Dhandu by Mahesh M Dhandu
May 19, 2022
in Newsbeat, State, ರಾಜ್ಯ
kc venugopal press conference in bangalore saaksha tv

kc venugopal press conference in bangalore saaksha tv

Share on FacebookShare on TwitterShare on WhatsappShare on Telegram

Bangalore | ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ : ಸಿ.ವೇಣುಗೋಪಾಲ್ ಒತ್ತಾಯ

ಬೆಂಗಳೂರು : ಮುಂಬರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಮ್. ಸಿ. ವೇಣುಗೋಪಾಲ್ ಅವರು ಒತ್ತಾಯಿಸಿದ್ದಾರೆ.

Related posts

shilpa-shaila-commonwealth-games-bronze-medal-karnataka-para-athlete

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ.

July 28, 2026
vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

July 28, 2026

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಅತಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಅತಿ ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಪಡಿಸಿಕೊಡಬೇಕು  ಎಂದು  ಮನವಿ ಮಾಡಿಕೊಂಡಿದ್ದಾರೆ. 

ಸ್ವಾತಂತ್ರ ಬಂದ ಈ ಏಳುವರೆ ದಶಕದಲ್ಲಿ ಅತಿ ಹಿಂದುಳಿದ ವರ್ಗಗಳ ಸುಮಾರು 197 ಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗಿವೆ.

ಪ್ರಸ್ತುತ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ 1995ಕ್ಕಿಂತ ಹಿಂದೆ ಸಲ್ಲಿಸಿದ ವರದಿಯನ್ನು ಆಧರಿಸಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ಸೇರಿಸದೇ ಕೈಬಿಟ್ಟ ಕೆಲವು ಜಾತಿ, ಉಪಜಾತಿಗಳನ್ನು ಸರ್ಕಾರ ಸ್ವಯಂ ಪ್ರೇರಣೆಯಿಂದಲೋ, ಒತ್ತಡಕ್ಕೆ ಒಳಗಾಗಿಯೋ ಸೇರ್ಪಡೆ ಮಾಡಿರುವುದರಿಂದ ಅರ್ಹ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯವಾಗಿದೆ. ಅನ್ಯಾಯದ ಫಲವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ಕೋಟ ಸಿಗದೆ ಸಂವಿಧಾನದ ಆಶಯ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

kc venugopal press conference in bangalore saaksha tv
kc venugopal press conference in bangalore saaksha tv

ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ 1952ರಿಂದ 2022ರವರೆಗಿನ 70 ವರ್ಷದಲ್ಲಿ ವಿಧಾನ ಪರಿಷತ್‍ನಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ. ಅಚ್ಚರಿಯಾಗಬಹುದಾದ ಅಧಿಕೃತ ವಿವರ ಈ ಕೆಳಕಂಡಂತಿದೆ. ಲಿಂಗಾಯತರು – 141, ಒಕ್ಕಲಿಗ -158, ಬ್ರಾಹ್ಮಣ -91, ಪ.ಜಾ -65, ಮುಸ್ಲಿಂ -54, ಕುರುಬ-20, ಪ.ಪಂ -18, ಈಡಿಗ -18, ಕೊಡವ -15, ಜೈನ್-14, ಬಂಟ -14, ಬಲಿಜ-13, ಕ್ರೈಸ್ತ -12, ಮರಾಠ -12, ಬೆಸ್ತ -11, ವೈಶ್ಯ-10, ರೆಡ್ಡಿ-9, ಗಾಣಿಗ-6, ದೇವಾಂಗ-5, ವಿಶ್ವಕರ್ಮ-4, ಉಪ್ಪಾರ-3, ನಾಯ್ಡು, ತಿಗಳ, ಮಡಿವಾಳ, ಹಿಂದೂ ಸಾದರು, ರಾಜು ಕ್ಷತ್ರಿಯ, ಭಂಡಾರಿ  – ತಲಾ 2, ಗೊಲ್ಲ, ಕುಂಬಾರ, ರಜಪೂತ್, ಮುದಲಿಯಾರ್, ಅರಸು, ದೇವಳಿ, ಸಿಂಧಿ, ಭಾವಸಾರ ಕ್ಷತ್ರಿಯ, ಸವಿತಾ – ತಲಾ 1 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಎಮ್. ಸಿ. ವೇಣುಗೋಪಾಲ್ ಅವರು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ರು.

ಪ್ರಸ್ತುತ, ವಿಧಾನಪರಿಷತ್ತಿನ 74 ಸದಸ್ಯರ ಸಮುದಾಯದ ವಿವರ ಹೀಗಿದೆ: ಒಕ್ಕಲಿಗ- 21, ಲಿಂಗಾಯತ -20, ಪ.ಜಾ- 5, ಕುರುಬ- 5, ಪ.ಪಂ, ಮುಸ್ಲಿಂ, ಬೆಸ್ತ – ತಲಾ 3, ಈಡಿಗ -3, ಕೊಡವ, ಬಂಟ, ಬ್ರಾಹ್ಮಣ – ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ್ – ತಲಾ 1. ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ ಎಂದರು. ಇವರೆಲ್ಲಾ ವಿಧಾನಸಭಾ ಸದಸ್ಯರಿಂದ ಚುನಾಯಿತರಾದವರು. ಈ ಸ್ಥಾನಗಳನ್ನು ತುಂಬಲು ಜೂನ್ ಮೊದಲವಾರ ಚುನಾವಣೆ ನಡೆಯಲಿದೆ ಎಂದರು.

ಪ್ರಸಕ್ತ ವಿಧಾನ ಸಭೆಯ  ಸದಸ್ಯರ  ಬಲದಂತೆ ( ಬಿಜೆಪಿ – 4, ಕಾಂಗ್ರೆಸ್- 2 ಮತ್ತು ದಳ – 1) ಚುನಾಯಿತರಾಗುವ ಸಂಭವವಿದೆ. ಹಿಂದುಳಿದ ವರ್ಗಗಳು ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳು ಹೊಂದಿರುವ ಜನಸಂಖ್ಯಾ ಸಾಮಥ್ರ್ಯಕ್ಕೆ ತಕ್ಕಂತೆ ಪರಿಷತ್ತಿನಲ್ಲಿ ಅವುಗಳ ಸಂಖ್ಯೆ ತೀರಾ ಕಡಿಮೆ ಇದೆ. ತಮ್ಮ ಪಕ್ಷದ ವತಿಯಿಂದ ಚುನಾಯಿಸಬಹುದಾದ ಸ್ಥಾನಗಳನ್ನೂ ಹಿಂದುಳಿದ ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳಿಗೆ ಅನ್ವಯಿಸುವಂತೆ ಅವಕಾಶ ಕಲ್ಪಿಸಿಕೊಟ್ಟು ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಎಂದು ಅವರು ಮನವಿ ಮಾಡಿದ್ರು.

ಇನ್ನು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಸುವುದು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಠಿಯಾಗಲು ಬಿಡದೆ ಚುನಾವಣೆ ನಡೆಸಬೇಕಾಗಿರುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ಗೆ ಚುನಾವಣೆ ನಡೆಸುವ ಸನ್ನಿವೇಶ ಕರ್ನಾಟಕದಲ್ಲೂ ಎದುರಾಗಿದೆ. ಹಾಗೇ  ಯಾವುದೇ ಕ್ಷಣದಲ್ಲೂ  ಚುನಾವಣೆ ದಿನಾಂಕ ಘೋಷಣೆಯಾಗುವ ಸಂಭವವಿದೆ. ಈ ಹಂತದಲ್ಲಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ರು. kc venugopal press conference in bangalore

ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ನಿಜವಾಗಿಯೂ ಆಸಕ್ತಿ ಮತ್ತು ಕಾಳಜಿ ಇದ್ದಲ್ಲಿ ಸಾಮೂಹಿಕವಾಗಿ ಒಂದು ತೀರ್ಮಾನಕ್ಕೆ ಬಂದು ಓಬಿಸಿ ಮೀಸಲಾತಿಯನ್ನು ಅಭ್ಯರ್ಥಿಯ ಬದಲು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಿದಾಗ ಮಾತ್ರ ಕರ್ನಾಟಕದ ಶೇಕಡ 62ಕ್ಕೂ ಹೆಚ್ಚಿರುವ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಬಗ್ಗೆ ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದು ಅವರು ಹೇಳಿದ್ರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಮ್. ನಾಗರಾಜ್, ಖಜಾಂಚಿ ಎಲ್.ಎ. ಮಂಜುನಾಥ್ , ನಾಗಭೂಷಣ್ , ಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

Tags: #Saaksha TVbangaloreC Venugopal
ShareTweetSendShare
Join us on:

Related Posts

shilpa-shaila-commonwealth-games-bronze-medal-karnataka-para-athlete

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ.

by admin
July 28, 2026
0

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ..ಗ್ಲಾಸ್ಗೋ ಪೋಡಿಯಂನಲ್ಲಿ ಕರುನಾಡಿನ ರೈತನ ಮಗಳ...

vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

by admin
July 28, 2026
0

ವಾಸ್ತು ಶಾಸ್ತ್ರ –  ದಿಕ್ಕು ನಿರ್ದೇಶನಗಳು, ಬ್ರಹ್ಮಸ್ಥಾನ (ಮಧ್ಯಭಾಗ) ತಟಸ್ಥ ಶಕ್ತಿಯ ಕೇಂದ್ರ (Neutral Energy Zone) ಮನೆಯ ಮಧ್ಯಭಾಗವನ್ನು ತೆರವು ಮತ್ತು ಸ್ವಚ್ಛವಾಗಿಡುವುದು ಉತ್ತಮ. ಶ್ರೀ ಕ್ಷೇತ್ರ...

guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

by admin
July 28, 2026
0

ಬುಧವಾರ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುವುದು ಈ ಮಂಗಳಕರ ದಿನ ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ...

rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

by admin
July 28, 2026
0

ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..! ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ...

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

by Shwetha
July 28, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram