ಕೈ ನಾಯಕರಿಗೆ ಮತಾಂಧರ ಮೇಲಿರೋ ಮೃದು ಧೋರಣೆ, ದಲಿತರ ಮೇಲೆ ಏಕಿಲ್ಲ..?
ಬೆಂಗಳೂರು : ಕಾಂಗ್ರೆಸ್ ನಾಯಕರಿಗೆ ಧರ್ಮಾಂಧರ, ಮತಾಂಧರ ಮೇಲಿರುವ ಮೃದು ಧೋರಣೆ, ದಲಿತರ ಮೇಲೆ ಏಕಿಲ್ಲ ಎಂದು ಪ್ರಶ್ನೆ ಮಾಡಿದೆ. ಕಲಬುರಗಿಯಲ್ಲಿ ದಲಿತ ಯುವಕನ ಹತ್ಯೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಬಿಜೆಪಿ ಟ್ವಿಟ್ಟರ್ ನಲ್ಲಿ..
ಅಂದು, ಕಾಂಗ್ರೆಸ್ ಶಾಸಕ, ದಲಿತ ನಾಯಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ಮತಾಂಧರು ಸುಟ್ಟಾಗ ಕಾಂಗ್ರೆಸ್ ನಾಯಕರಿಗೆ ದಲಿತ ನಾಯಕನ ಕೂಗು ಕೇಳಿಸಲೇ ಇಲ್ಲ.
ಇಂದು, ಕಲಬುರ್ಗಿಯ ದಲಿತ ಯುವಕನನ್ನು ಧರ್ಮಾಂಧರು ಹತ್ಯೆ ಮಾಡಿದಾಗ ಕಾಂಗ್ರೆಸ್ಸಿಗರು ಇದಕ್ಕೆ ಮತೀಯ ಬಣ್ಣ ಬಳಿಯಬೇಡಿ ಎಂದು ಪ್ರವಚನ ನೀಡುತ್ತಿದ್ದಾರೆ.
ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ, ಕ್ರೌರ್ಯ, ಕೊಲೆ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಏಕೆ ಮೌನವಾಗಿರುತ್ತದೆ?#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) May 28, 2022
ದಲಿತರ ಮೇಲಿನ ದೌರ್ಜನ್ಯಗಳನ್ನು ಬಿಜೆಪಿ ತಲೆಗೆ ಕಟ್ಟುವ ಕಾಂಗ್ರೆಸ್ ಕಲಬುರ್ಗಿಯ ದಲಿತನ ಹತ್ಯೆಯನ್ನು ಸಮರ್ಥಿಸುತ್ತಿರುವುದೇಕೆ?
ಆರೋಪಿಗಳ ಸಮುದಾಯದ ಮತ ತಪ್ಪುತ್ತದೆ ಎಂಬ ಭಯವೇ? ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್ ಪಕ್ಷಕ್ಕೆ ಒಪ್ಪಿತವೇ ಎಂದು ಪ್ರಶ್ನೆ ಮಾಡಿದೆ.
ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ, ಕ್ರೌರ್ಯ, ಕೊಲೆ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಏಕೆ ಮೌನವಾಗಿರುತ್ತದೆ ಎಂದು ಬಿಜೆಪಿ ಕಿಡಿಕಾರಿದೆ. kalaburagi murder case bjp slams congress on twitter








